ಫಸ್ಟ್ ಸುದ್ದಿ : ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹೆಚ್ಚಾಗಿ ಉಪ್ಪು ಮಿಶ್ರಿತ ಆಹಾರವನ್ನು ಸೇವಿಸುತ್ತಿದೆ, ಇದರಿಂದ ಇಳಿವಯಸ್ಸಿನಲ್ಲಿ ಹೃದಯ ಸಂಬಂಧಿಸಿದ ಖಾಯಿಲೆಗೆ ತುತ್ತಾಗುವ ಸಾಧ್ಯತೆಯಿದೆಯೆಂದು ಇತ್ತೀಚೆಗೆ ಅಧ್ಯಯನ ನಡೆಸಿದ ಸಂಸ್ಥೆಯೊಂದು ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಅಮೇರಿಕಾದ ಮಕ್ಕಳ ಆಸ್ಪತ್ರೆಯೊಂದು ಇದರ ಬಗ್ಗೆ ಅಧ್ಯಯನ ನಡೆಸಿದ್ದು, ಇದರ ಸಂಶೋಧನೆಯಲ್ಲಿ 775 ಜನರನ್ನು ಬಳಸಿಕೊಳ್ಳಲಾಗಿತ್ತು. ಮೂರು ದಿನಗಳಲ್ಲಿ ಇವರು ಬಳಸುತ್ತಿದ್ದ ಉಪ್ಪಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಉಪ್ಪಿನ ಪ್ರಮಾಣವನ್ನು ಹೆಚ್ಚು ಸೇವಿಸುತ್ತಾ ಹೋಗುವವರಿಗೆ ಆರ್ಟರಿ ಸಡಿಲಗೊಳ್ಳುತ್ತಾ ಹೋಗುತ್ತಿತ್ತು. ಇದು ಕಾಲ ಕ್ರಮೇಣ ಹೃದಯ ಸಂಬಂಧಿ ತೊಂದರೆ ಹಾಗೂ ಪಾರ್ಶ್ಚವಾಯುಗೆ ಕಾರಣವಾಗುತ್ತದೆ ಎಂದು ಅಧ್ಯಯನ ಸಂಸ್ಥೆ ಆತಂಕವನ್ನು ವ್ಯಕ್ತಪಡಿಸಿದೆ.
ಉಪ್ಪಿನ ಜೊತೆಯಲ್ಲಿ ಸೋಡಿಯಂ ಪ್ರಮಾಣ ದೇಹವನ್ನು ಸೇರಿ, ದೀರ್ಘಕಾಲದ ಆರೋಗ್ಯದ ಮೇಲೆ ಪ್ರಭಾವನ್ನು ಭೀರುತ್ತದೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಯುವ ಜನತೆ ತಮ್ಮ ಆಹಾರದಲ್ಲಿ ಅಗತ್ಯಕ್ಕಿಂತ ಉಪ್ಪಿನ ಪ್ರಮಾಣವನ್ನು ಹೆಚ್ಚು ಸೇವಿಸುತ್ತಿರುವುದು ಧೃಡಪಟ್ಟಿದೆ. ಇದಕ್ಕೆ ನಿತ್ಯ ಯುವ ಜನತೆ ಬೀದಿ ಬದಿಯ ಆಹಾರ ಹಾಗೂ ಜಂಕ್ ಆಹಾರವೂ ಕೂಡಾ ಕಾರಣವಾಗಿದೆಯಂತೆ. ಹೀಗಾಗಿ ಯುವ ಜನತೆ ತಮ್ಮ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದು ದೇಹಕ್ಕೆ ಹಾಗೂ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಆಸ್ಪತ್ರೆಯ ನಿರ್ದೇಶಕರ ಮಾತು.










