ಮಗ ವಿವಾಹಿತೆಯೊಂದಿಗೆ ಪರಾರಿ: ಮನನೊಂದ ಯುವಕನ ಅಪ್ಪ, ಅಮ್ಮಆತ್ಮಹತ್ಯೆಗೆ ಶರಣು…

275
firstsuddi

ರಾಮನಗರ:  ಮಗ  ವಿವಾಹಿತೆಯೋರ್ವಳೊಂದಿಗೆ   ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದ ಪೋಷಕರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ  ಜಿಲ್ಲೆಯ ಕನಕಪುರ ತಾಲೂಕಿನ ಕಲ್ಲಿಗೌಡನದೊಡ್ಡಿಯಲ್ಲಿ  ನಡೆದಿದೆ. ಸಿದ್ದರಾಜು(52), ಸಾಕಮ್ಮ(42) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರ  ಮಗ ಮನು ಎಂಬಾತ ಅದೇ ಗ್ರಾಮದ  ಲತಾ( ಹೆಸರು ಬದಲಾಯಿಸಿದೆ) ಎಂಬ ವಿವಾಹಿತೆಯ ಜೊತೆ ಮನೆ ಬಿಟ್ಟು  ಹೋಗಿದ್ದಾರೆಂದು  ಗೃಹಿಣಿಯ ಕುಟುಂಬದವರು ಯುವಕನ ಮನೆ ಮುಂದೆ ಗಲಾಟೆ ಮಾಡಿದ್ದಾರೆ ಇದರಿಂದ ಮನನೊಂದ  ಯುವಕನ ಅಪ್ಪ, ಅಮ್ಮ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮೃತದೇಹಗಳನ್ನು ಕನಕಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.