ನವಜಾತ ಶಿಶುವಿಗೆ ಎದೆ ಹಾಲು ರಕ್ಷಣಾತ್ಮಕ ಹಾಗೂ ಆರೋಗ್ಯಕರವಾದ ಅಹಾರವಾಗಿದೆ…

756
firstsuddi

ನೀವು ಗರ್ಭಿಣಿಯಾಗಿದ್ದಾಗ್ಗೆಅಥವಾ ಹೊಸದಾಗಿ ತಾಯಿಯಾಗಿದ್ದರೆ, ನೀವು ಸ್ತನ ಪಾನ (ಎದೆ ಹಾಲು ಕುಡಿಸುವಿಕೆ) ಬಗ್ಗೆ ಹಲವಾರು ಕಥೆಗಳನ್ನು ಕೇಳಿರುತ್ತೀರಿ. ಅವುಗಳಲ್ಲಿ ಕೆಲವು ಮೊಲೆ ಹಾಲುಡುಸುವಿಕೆಯು ನಿಮಗೆ ಸರಿಯೋ ಅಥವಾಇಲ್ಲವೋ ಎಂಬುದರ ಬಗ್ಗೆ ಚಕಿತ ಪಡಿಸುತ್ತದೆ. ನೀವು ಕೇಳಿರಬಹುದು ನಾನು ನನ್ನ ಮಕ್ಕಳಿಗೆ ಎದೆ ಹಾಲನ್ನು ಕುಡಿಸಲಿಲ್ಲ, ಅದರೂ ಅವರು ಚೆನ್ನಾಗಿ ಬೆಳೆದಿರುತ್ತಾರೆ. ನಿಜವಾದ ಅಂಶವೇನೆಂದರೆ ಆರು ತಿಂಗಳುಗಳ ಕಾಲ ಕೇವಲ ಎದೆ ಹಾಲನ್ನುಕುಡಿಸುವುದರಿಂದ, ಮಗುವಿಗೆ ಹಾಗೂ ತಾಯಿಗೆ ಹಲವಾರು ಅನುಕೂಲತೆಗಳು ಇರುತ್ತದೆ.
ಇದು ಮಗುವಿನಲ್ಲಿ, ಒಬೆಸಿಟಿ, ಮಧುಮೇಹ, ನಿಮೋನಿಯಾ ಮತ್ತುಇತರೆ ಉಸಿರಾಟದ ಸೋಂಕುಗಳು, ಕೆಮ್ಮು, ಮತ್ತು ಶೀತ, ಗ್ಯಾಸ್ಟ್ರಿಕ್ ತೊಂದರೆಗಳು, ವಾಂತಿ, ಡಯೇರಿಯಾ, ಕಾನ್ಸ್ಟಿವೇಶನ್, ಯುರಿನರಿಟ್ರಾಕ್ಟ್ ಸೋಂಕುಗಳು, ಕಿವಿ ಸೋಂಕುÀ ಕೇಳುವಿಕೆಗೆ (ಶ್ರವಣ) ತೊಂದರೆಯಾಗುವುದು, ಮೆನಿಂಗಿಟಿಸ್, ಬಾಲ್ಯದಲ್ಲಿನ ಕ್ಯಾನ್ಸ್‍ರ್‍ಗಳು, ಲ್ಯೂಕೆಮಿಯಾ ಮತ್ತು ಲಿಮ್‍ಫೋಮಾ, ಖ್ರಾನ್ಸ್ ಕಾಯಿಲೆ, ಅಲ್ಸರೇಟಿವ್‍ಕೊಲೈಟಿಸ್, ಸಿಲಿಯಾಕ್ ಕಾಯಿಲೆ, ಹೃದಯ ಕಾಯಿಲೆ ಮತ್ತು ಕರುಳು ರೋಗಗಳನ್ನು ಹಿರಿಯ ವಯಸ್ಸಿನಲ್ಲಿ ಆಗುವುದನ್ನು ತೊಂದರೆಗಳನ್ನು ಕಡಿಮೆಗೊಳಿಸುತ್ತದೆ.
ಮಗು ಹುಟ್ಟಿದ ಒಂದು ಗಂಟೆಯ ಒಳಗಾಗಿ ಎದೆ ಹಾಲು ಕುಡಿಸುವುದರಿಂದ, ಇದು ನವಜಾತ ಶಿಶುವನ್ನು ಸೋಂಕು ಹೊಂದುವುದರಿಂದ ತಡೆಯುತ್ತದೆ ಮತ್ತು ಹೊಸದಾಗಿ ಹುಟ್ಟುವ ಮಾರ್ಟಲಿಟಿಯನ್ನು ಕಡಿಮೆಗೊಳಿಸುತ್ತದೆ.ಎದೆ ಹಾಲು ಪೌಷ್ಠಿಕಾಂಶಗಳ ಪ್ರಮುಖ ಮೂಲವಾಗಿದ್ದು, ಇದು 6-23 ತಿಂಗಳ ಮಗುವಿನಲ್ಲಿಇರುತ್ತದೆ. ಇದು 6 ಮತ್ತು 12 ತಿಂಗಳುಗಳ ವಯಸ್ಸಿನ ಮಗುವಿನಲ್ಲಿ ಅಗತ್ಯವಿರುವ ಶಕ್ತಿಯನ್ನುಅರ್ಧಅಥವಾಇನ್ನೂ ಹೆಚ್ಚಾಗಿ ನೀಡುತ್ತದೆ ಮತ್ತು 12 ಮತ್ತು 24 ತಿಂಗಳುಗಳ ನಡುವಣ ವಯಸ್ಸಿನ ಮಗುವಿಗೆ ಮೂರನೇ ಒಂದು ಭಾಗದಷ್ಟು ಶಕ್ತಿ ಬೇಕಾಗುತ್ತದೆ. ಕಾಯಿಲೆ ಬಿದ್ದಾಗಎದೆ ಹಾಲು ಪೌಷ್ಟಿಕಾಂಶಗಳ ಮುಲವಾಗಿರುತ್ತದೆ ಮತ್ತು ಅಪೌಷ್ಟಿಕಾಂಶದಿಂದ ಬಳಲುತ್ತಿರುವ ಮಕ್ಕಳಲ್ಲಿ ಮಾರ್ಟಿಲಿಟಿ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಎದೆ ಹಾಲು ಕುಡಿಸುವುದರಿಂದ, ಮಗು ಹುಟ್ಟಿದ ನಂತರ ತಾಯಿಯು ಗುಣಮುಖವಾಗಲು ಸಹಾಯ ಮಾಡುತ್ತದೆ ಮತ್ತು ಮಗುವಿನ ಜನನದ ನಂತರ ಉಂಟಾಗುವ ಹೆಚ್ಚಿನ ರೀತಿಯರಕ್ತ ಸ್ರಾವವನ್ನು ತಡೆಗಟ್ಟುತ್ತದೆ ಮತ್ತು ಗರ್ಭಿಣಿ ಪೂರ್ವದ ತೂಕವನ್ನು ಶೀಘ್ರವಾಗಿ ಹೊಂದುತ್ತಾರೆ. ಈ ರೀತಿಯಲ್ಲಿ ದಿನ ಒಂದಕ್ಕೆ 500 ಹೆಚ್ಚುವರಿ ಕ್ಯಾಲೋರಿಗಳನ್ನು ಸುಟ್ಟು ಹಾಕುತ್ತದೆ. ನಂತರದ ಜೀವನದಲ್ಲಿ ಶಕ್ತಿಯುತವಾದ ಮೂಳೆಗಳನ್ನು ಹೊಂದುತ್ತಾರೆ. ಮತ್ತು ಅವರುಗಳು ಮಗುವಿನೊಂದಿಗೆ ಅಂದರೆತಮ್ಮ ಮಗುವಿನೊಂದಿಗೆ ಶಕ್ತಿಯುತವಾದ ಭಾವಪರವಶತೆಯನ್ನು ಹೊಂದುತ್ತಾರೆ. ಸಮಾದಾನ ಹೊಂದುತ್ತಾರೆ. ಮಗುವಿಗೆ ಪ್ರತಿ ಬಾರಿ ಹಾಲುಣಿಸಿದಾಗೆ ತಾಯಿಯು ಬಂಧಪಡಿಸುವ ಹಾರ್ಮೋನ್ ಆಕ್ಸಿಟಾಸಿಸ್ ಉತ್ಪಾದನೆಯನ್ನು ಹೊಂದುತ್ತಾಳೆ. ಇದುಆರಾಮದಾಯಕ ಹಾಗೂ ವಿಶ್ರಾಂತ ಸ್ಥಿತಿಯ ಪರಿಣಾಮವನ್ನು ಹೊಂದಿರುತ್ತದೆ.
ಭಾರತದಲ್ಲಿನರಾಷ್ಟ್ರೀಯಕೌಟುಂಬಿಕಆರೋಗ್ಯ ಸಮೀಕ್ಷೆ 2015-16 (ಎನ್‍ಎಫ್ ಹೆಚ್ ಎಸ್-4) ರರೀತ್ಯಾ ಕೇವಲ ಶೇ.42.6 ರಷ್ಟುತಾಯಿಂದಿರು ಮಾತ್ರವೇ ಮಗು ಹುಟ್ಟಿದಒಂದುಗಂಟೆಯ ಒಳಗಾಗಿ ಎದೆ ಹಾಲುಣಿಸುವಕ್ರಮವನ್ನು ಅಳವಡಿಸಿಕೊಳ್ಳುತ್ತಾರೆ. ಶೇ.78.9ರಷ್ಟು ಜನನಗಳು ಆರೋಗ್ಯಯುಕ್ತ ಸೌಕರ್ಯಗಳನ್ನು ಹೊಂದಿದ್ದರು ಸಹ ಈ ಪದ್ಧತಿಯನ್ನುಅನುಸರಿಸುತ್ತಾರೆ. ಎನ್.ಎಫ್.ಹೆಚ್.ಎಸ್‍ರಂತೆಕರ್ನಾಟಕದಲ್ಲಿ 6 ತಿಂಗಳುಗಳ ಒಳಗಿನ ಶೇ.55 ರಷ್ಟು ಮಕ್ಕಳು ಮಾತ್ರವೇಇಂತಹಎದೆ ಹಾಲನ್ನು ಪಡೆದವರಾಗಿರುತ್ತಾರೆ ಶಿಶುವು ತನ್ನಜೀವನದ ಪ್ರಥಮ ದಿನದ ಒಳಗೆ ಶೇ.82 ರಷ್ಟು ಮಕ್ಕಳು ಮಾತ್ರವೇ ಎದೆ ಹಾಲನ್ನು ಕುಡಿಯುತ್ತವೆ. ಕೇವಲ 58 ಶೇಕಡಾ ತಾಯಂದಿರು ಮಾತ್ರವೇ ಮಗುವಿನ ಜೀವನದ ಮೊದಲನೇ ಗಂಟೆಯಲ್ಲಿಎದೆ ಹಾಲನ್ನುಕುಡಿಸಲು ಪ್ರಾರಂಭಿಸುತ್ತಾರೆ.
ಎದೆ ಹಾಲನ್ನುಕುಡಿಸುವುದರಿಂದ ಆಗುವ ಅನುಕೂಲತೆಗಳು:
1) ಒಂದು ಆರೋಗ್ಯಯುಕ್ತ ಮಗು: ಎದೆ ಹಾಲನ್ನು ಕುಡಿಸಿದ ಮಕ್ಕಳುಗಳು ನಿಮೋನಿಯಾ ಶೀತ ಮತ್ತು ವೈರಸ್ ಪ್ರಕರಣಗಳನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತಾರೆ.
2) ಮಾರಕ ಸ್ಥಿತಿ ಅಂದರೆ, ಮಾದರಿ 1 ಮಧುಮೇಹ, ಸಿಲಿಯಾಕ್ ಕಾಯಿಲೆಗಳು ಮತ್ತುಖ್ರಾನ್ಸ್ ಕಾಯಿಲೆಗೆ ಬೀಳುವುದರಿಂದ ನಿಮ್ಮ ಮಗುವನ್ನು ದೀರ್ಘಕಾಲದವರೆಗೆರಕ್ಷಿಸುತ್ತದೆ.
3) ಶಕ್ತಿಯುತವಾದ ಮೂಳೆಗಳು:- ಯಾವ ಮಹಿಳೆಯು ಎದೆ ಹಾಲನ್ನು ಕುಡಿಸುತ್ತಾಳೋ ಅವಳಿಗೆ ಮೇನೋಪಾಸ್ (ಹೊರಗಡೆಆಗುವುದು) ನಂತರದ ಅಸ್ಟಿಯೋಪೋರೋಸಿಸ್ ತೊಂದರೆಗಳನ್ನು ಕಡಿಮೆ ಮಾಡುತ್ತದೆ.
4) ಕ್ಯಾನ್ಸರ್ ಬರುವ ಸಾಧ್ಯತೆಯನ್ನುಕಡಿಮೆ ಮಾಡುತ್ತದೆ. ಎದೆ ಹಾಲನ್ನುಕುಡಿಸುವದರಿಂದ ಕೆಲವು ಬಾಲ್ಯದಲ್ಲಿಕಂಡು ಬರುವಕ್ಯಾನ್ಸ್‍ರ್ ಸಾಧ್ಯತೆಯನ್ನುಕಡಿಮೆ ಮಾಡಬಹುದು. ಮತ್ತು ನಿಮಗೂ ಸಹ ಪ್ರೀಮೀಸೋಪಾಸಲ್ ಸ್ತನ ಕ್ಯಾನ್ಸ್‍ರ್‍ನ ಸಾಧ್ಯತೆಯುಕಡಿಮೆಯಾಗುತ್ತದೆ. ಹಾಗೂ ಒವೇರಿಯನ್‍ಕ್ಯಾನ್ಸ್‍ರ್ ಸಾಧ್ಯತೆಯನ್ನು ಸಹ ನಿಮಗೆ ಕಡಿಮೆಗೊಳಿಸುತ್ತದೆ.
5) ಹೆಚ್ಚು ಪರಿಣಾಮಕಾರಿ ಚುಚ್ಚುಮದ್ದುಗಳು:- (ವ್ಯಾಕ್ಸಿನ್ಸ್) ಸಂಶೋಧನೆಯುತೋರಿಸುವುದೇನೆಂದರೆಎದೆ ಹಾಲು ಕುಡಿದ ಮಕ್ಕಳು ಅಂಟಿಬಾಡಿರೆಸ್ಟಾನ್ಸ್ ವ್ಯಾಕ್ಸಿನ್‍ಗಳನ್ನು ಹೊಂದಿರುತ್ತವೆ. ಎಂಬುದಾಗಿರುತ್ತದೆ. (ವ್ಯಾಕ್ಸಿಗೆ ಸ್ಪಂದಿಸುವುದು)
6) ಶಿಶುಗಳಿಗೆ ಉತ್ತಮ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ.
7) ಎದೆ ಹಾಲು ಪ್ರಮುಖವಾದ ಆಂಟಿಬಾಡಿಗಳನ್ನು ಹೊಂದಿರುತ್ತದೆ.
8) ಯಾವತಾಯಿಯುಎದೆ ಹಾಲು ಕುಡಿಸುತ್ತಾರೋಅಂತಹತಾಯಿಗೆಖಿನ್ನತೆ ಮತ್ತು ಪೋಸ್ಟ್‍ಮೆನೋಪಾಸಲ್ ಅಸ್ಟಿಯೋಪೋರೋಸಿಸ್ ತೊಂದರೆಗಳನ್ನು ಕಡಿಮೆಯಾಗುತ್ತದೆ.
‘ಯಾವ ಮಹಿಳೆಯು ಎದೆ ಹಾಲನ್ನು ಕುಡಿಸಿರುವುದಿಲ್ಲವೋಅಂತಹ ಮಹಿಳೆಯರು ನಂತರದಜೀವನದಲ್ಲಿ ಮಧುಮೇಹ, ಅಸ್ಟಿಯೋಪೋರೋಸಿಸ್ ಸ್ತನ, ಒಪೇರಿಯನ್ ಮತ್ತು ಎಂದೋಮಿಟ್ರಿಯಲ್‍ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಬಹಳವಾಗಿರುತ್ತೆ ಎಂಬುದಾಗಿ ಚಿಕ್ಕಮಂಗಳೂರಿನ ವಾತ್ಸಲ್ಯಆಸ್ಪತ್ರೆಯವರು ಹೇಳುತ್ತಾರೆ.