ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸೇರುತ್ತಿರುವ ಸಚಿವರ ಹೆಸರನ್ನು ಇಂದು ಅಂತಿಗೊಳಿಸಲಾಗಿದ್ದು, ನೂತನ ಸಚಿವರಾದ ಎಂ.ಬಿ.ಪಾಟೀಲ್,ಸಿ.ಎಸ್. ಶಿವಳ್ಳಿ,ಸತೀಶ್ ಜಾರಕಿಹೊಳಿ,ಎಂ.ಟಿ.ಬಿ ನಾಗರಾಜ್,ಇ. ತುಕಾರಾಂ, ಪರಮೇಶ್ವರ ನಾಯಕ್ , ಆರ್.ಬಿ. ತಿಮ್ಮಾಪುರ, ರಹೀಂಖಾನ್ ಅವರು ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಸಂಜೆ 5.20ಕ್ಕೆ ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿವಾಲ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.










