ವಿಷ ಪ್ರಸಾದ ದುರಂತ: ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆ…

311
firstsuddi

ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ  ಕಿಚ್ಚುಗತ್ತಿ ಮಾರಮ್ಮನ ದೇವಾಲಯದಲ್ಲಿ ವಿಷ  ಪ್ರಸಾದ ಸೇವಿಸಿ  ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ರಂಗನ್ (45) ಅವರು ದೇವಸ್ಥಾನದಲ್ಲಿ  ವಿಷ ಪ್ರಸಾದ ಸೇವಿಸಿ  ಅಸ್ವಸ್ಥರಾಗಿದ್ದ  ಅವರನ್ನು  ಮೈಸೂರಿನ ಸುಯೋಗ್​​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಂಗನ್ ಅವರು ಇಂದು ಮೃತಪಟ್ಟಿದ್ದಾರೆ.