ರಮೇಶ್​ ಜಾರಕಿಹೊಳಿ ಅವರು ಆವೇಶದಲ್ಲಿ ಮಾತನಾಡಿದ್ದಾರೆ:ಡಿ ಕೆ ಶಿವಕುಮಾರ್…

310
firstsuddi

ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ ಕೆ ಶಿವಕುಮಾರ್ ಅವರು ಎಲ್ಲರಿಗೂ ಆಸೆ ಇರುತ್ತದೆ. ಅದೇನು ತಪ್ಪಲ್ಲ.ರಮೇಶ್​ ಜಾರಕಿಹೊಳಿ ಅವರು ಆವೇಶದಲ್ಲಿ ಮಾತನಾಡಿದ್ದಾರೆ.ರಮೇಶ್​ ಜಾರಕಿಹೊಳಿ ನನ್ನ ಸ್ನೇಹಿತರೇ, ಅವರ ಬಳಿ ಮಾತನಾಡುತ್ತೇನೆ. ನನಗೂ ಕೂಡ ಈ ಹಿಂದೆ ಸಚಿವ ಸ್ಥಾನ ಸಿಗದೆ ಏಳೆಂಟು ತಿಂಗಳು ಖಾಲಿ ಇದ್ದೆ. ಧರ್ಮಸಿಂಗ್​ ಅವಧಿಯಲ್ಲೂ ನನ್ನನ್ನು ಹೊರಗಿಟ್ಟಿದ್ದರು. ಯಾವ ನಾಯಕರೂ ನನ್ನ ಪರ ಮಾತನಾಡಲು ಬರಲಿಲ್ಲ. ನಂತರ ಹೈಕಮಾಂಡ್​ ಕರೆದು ಸಚಿವ ಸ್ಥಾನ ಕೊಟ್ಟಿತು ಎಂದಿದ್ದಾರೆ.