ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಬೆಂಗಳೂರಿನ ಹೆರ್ಮಾನ್ ಚರ್ಚ್‍ನ ಭಕ್ತರ ಸಂಕೀರ್ತನಾ ಯಾತ್ರೆ…

406
firstsuddi

ಚಿಕ್ಕಮಗಳೂರು: ವಾರ್ಷಿಕ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಬೆಂಗಳೂರಿನ ಹೆರ್ಮಾನ್ ಚರ್ಚ್‍ನ ಭಕ್ತರ ತಂಡವೊಂದು ನಗರದಲ್ಲಿ ಸೋಮವಾರ ಸಂಕೀರ್ತನಾ ಯಾತ್ರೆ ನಡೆಸಿತು.
ಹನುಮಂತಪ್ಪ ವೃತ್ತದಿಂದ ನಾಮ ಸಂಕೀರ್ತನೆ ಮಾಡುತ್ತಾ ಕಾಲ್ನಡಿಗೆಯಲ್ಲಿ ಹೊರಟ ತಂಡ ಸಾರ್ವಜನಿಕರಿಗೆ ಹಬ್ಬದ ಗ್ರೀಟಿಂಗ್ಸ್ ಮತ್ತು ಸಿಹಿಯನ್ನು ವಿತರಿಸುತ್ತಾ ವಿವಿಧ ಬೀದಿಗಳಲ್ಲಿ ಸಂಚರಿಸಿತು.
ಇದೇ ವೇಳೆ ಬಡವರು ಮತ್ತು ಭಿಕ್ಷುಕರಿಗೆ ವಸ್ತ್ರವನ್ನು ವಿತರಿಸಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ ಹ್ಯೂಮನ್ ರೈಟ್ಸ್ ಕೌನ್ಸಿಲ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಜಾನ್ ಜೆ. ಸ್ಯಾಮ್ಯುಯೆಲ್ ಕಿಂ. ಕ್ರಿಸ್‍ಮಸ್ ಹಬ್ಬದ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಯಾತ್ರೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಹೆರ್ಮಾನ್ ಚರ್ಚ್‍ನ ಮುಖಂಡರಾದ ಡಿ.ಜರ್ನಸ್, ನವೀನ್ ಕುಮಾರ್, ಮೋಸಸ್, ಸಾಲೋಮನ್ ಜಾನ್ ಸ್ಯಾಮ್ಯುಯೆಲ್, ಪಾಲ್ ಪೀಟರ್, ಮೇರಿ, ಫಿಲೋಮಿನ ತಂಡದಲ್ಲಿದ್ದರು.