ದ. ಕ ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಸಂಯುಕ್ತಶ್ರಯದಲ್ಲಿ ಕುರಂಜಿ ವೆಂಕಟರಮಣ ಗೌಡರ ಪುತ್ಥಳಿಗೆ ಮಾಲಾರ್ಪಣ ಕಾರ್ಯಕ್ರಮ…

243
firstsuddi

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಇವರ ಸಂಯುಕ್ತಶ್ರಯದಲ್ಲಿ ಸುಳ್ಯದ ನಿರ್ಮಾತೃ ದಿವಂಗತ ಡಾ ಕುರಂಜಿ ವೆಂಕಟರಮಣ ಗೌಡರ ಹುಟ್ಟು ಹಬ್ಬದ ಪ್ರಯುಕ್ತ ನಗರದ ಬಸ್  ನಿಲ್ದಾಣ ಬಳಿ ನಿರ್ಮಾಣಗೊಂಡಿರುವ ಕಾರಂಜಿ ವೆಂಕಟರಮಣ ಗೌಡರ ಪುತ್ಥಳಿಗೆ ಮಾಲಾರ್ಪಣ ಕಾರ್ಯಕ್ರಮ ಇಂದು ನಡೆದಿದ್ದು, ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ ಅವರು ಪ್ರತಿಜ್ಞಾವಿಧಿ  ಬೋಧಿಸಿದ್ದು, ಕಟ್ಟಡ ಕಾರ್ಮಿಕರ ಸಂಘದ  ಮಾಜಿ ಅಧ್ಯಕ್ಷ ನಾಗರಾಜ ಮೇಸ್ತ್ರಿ, ಅವಿನಾಶ್ ಬಸ್ ಮಾಲೀಕ ನಾರಾಯಣ ರೈ,  ರಿಕ್ಷಾ ಯೂನಿಯನ್ ಮಾಜಿ ಅಧ್ಯಕ್ಷ  ವಿಜಯಕುಮಾರ್ ಉಬರಡ್ಕ, ಅವರು ಮುಖ್ಯ ಅತಿಥಿಗಳಾಗಿದ್ದು, ಸಮಿತಿಯ ಕಾರ್ಯದರ್ಶಿ ಈಶ್ವರ್ ವಾರಣಾಶಿ ಅವರು ವಂದಿಸಿದರು.