ಬೆಂಗಳೂರು: ಇಂದಿರಾ ಕ್ಯಾಂಟೀನ್​ ಗೆ ತಟ್ಟಿಲ್ಲ ಭಾರತ್ ಬಂದ್ ನ  ಬಿಸಿ…

209
firstsuddi

ಬೆಂಗಳೂರು: ಮೋಟಾರು ವಾಹನ ಮಸೂದೆ, ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಇಂದು ಹಾಗೂ ನಾಳೆ  ಎರಡು ದಿನ ಭಾರತ್ ಬಂದ್ ಗೆ ಕರೆ ನೀಡಿದೆ. ಆದರೆ ಇಂದಿರಾ ಕ್ಯಾಂಟೀನ್​ ಗೆ ಬಂದ್ ನ  ಬಿಸಿ ತಟ್ಟಿಲ್ಲ. ಇಂದಿರಾ ಕ್ಯಾಂಟೀನ್ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ಇಂದಿನ ಉಪಹಾರಕ್ಕೆ ಇಡ್ಲಿ ಮತ್ತು ಉಪ್ಪಿಟ್ಟು ಮಾಡಲಾಗಿದ್ದು, ಗ್ರಾಹಕರು ಎಂದಿನಂತೆ ಇಂದಿರಾ ಕ್ಯಾಂಟೀನ್​​ಗೆ ಉಪಹಾರಕ್ಕೆ ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ.