ಭಾರತ ಬಂದ್‍  ಹಿನ್ನೆಲೆ ಸಾರ್ವಜನಿಕರು ಶಾಂತಿಯನ್ನು ಕಾಪಾಡಬೇಕು: ಎಂ ಬಿ ಪಾಟೀಲ್…

226
firstsuddi

ಬೆಂಗಳೂರು:  ವಿವಿಧ ಸಂಘಟನೆಗಳು ಭಾರತ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳ ಕುರಿತು ರಾಜ್ಯ ಪೋಲೀಸ್ ಮಹಾನಿರ್ದೇಶಕರ ಜೊತೆ ಗೃಹ ಸಚಿವ ಎಂ ಬಿ ಪಾಟೀಲ್ ಅವರು ಚರ್ಚಿಸಿದ್ದು, ಕಿಡಿಗೇಡಿಗಳು ಬಸ್‍ಗಳ ಮೇಲೆ  ಕಲ್ಲು ಎಸೆಯುವ ಕೃತ್ಯ ಎಸಗಿದರೆ ಅವರ  ವಿರುದ್ಧ   ಕಠಿಣ ಕ್ರಮ ಕೈಗೊಳ್ಳುವಂತೆ  ಎಂ ಬಿ ಪಾಟೀಲ್ ಅವರು ಪೊಲೀಸರಿಗೆ ಸೂಚಿಸಿದ್ದಾರೆ . ಹಾಗೂ ಸಾರ್ವಜನಿಕರು ಶಾಂತಿಯನ್ನು ಕಾಪಾಡಬೇಕು. ಇಲಾಖೆಗೆ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ .