ಕಲರ್ ಸೂಪರ್ ವಾಹಿನಿಯ ‘ಕನ್ನಡ ಕೋಗಿಲೆ’ ಶೋಗೆ ಬಕ್ಕಿ ಮಂಜುನಾಥ್,ಸುರಕ್ಷಿತ್‍ಗೌಡ ಆಯ್ಕೆ…

767
firstsuddi

ಮೂಡಿಗೆರೆ : ಮಂಗಳೂರಿನ ಯೆಯ್ಯಾಡಿಯಲ್ಲಿ ನಡೆದ ಕಲರ್ ಸೂಪರ್ ವಾಹಿನಿಯ ‘ಕನ್ನಡ ಕೋಗಿಲೆ’ ಶೋ ಕಾರ್ಯಕ್ರಮದ ಆಡಿಷನ್‍ನಲ್ಲಿ ಮಲೆನಾಡಿನ ಹಾಡುಗಾರ ಬೆಟ್ಟಿಗೆರೆ ಗ್ರಾಮದ ಬಕ್ಕಿ ಮಂಜುನಾಥ್ ಹಾಗೂ ಕೊಟ್ಟಿಗೆಹಾರದ ಅತ್ತಿಗೆರೆಯ ಸುರಕ್ಷಿತ್‍ಗೌಡ ಆಯ್ಕೆಯಾಗಿದ್ದಾರೆ.
ಮೊದಲ ಎರಡನೇಯ ಹಾಗೂ ಮೂರನೇಯ ಸುತ್ತಿಗೆ ಕನ್ನಡ ಕೋಗಿಲೆ ಆಡಿಷನ್‍ಗೆ ಸ್ಪರ್ಧಿಗಳು ಕನ್ನಡ ಭಕ್ತಿಗೇತೆಗಳು, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಭಾವಗೀತೆಗಳು, ಚಿತ್ರಗೀತೆಗಳು, ಜಾನಪದ ಗೀತೆಗಳು ಹೀಗೆ ಅನೇಕ ವಿವಿಧ ಹಾಡು ಹಾಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ‘ಕನ್ನಡ ಕೋಗಿಲೆ’ ಶೋ ಕಾರ್ಯಕ್ರಮದ ಆಡಿಷನ್‍ನಲ್ಲಿ ಮೂರನೇ ಸುತ್ತಿಗೆ ಮಲೆನಾಡಿನ ಇಬ್ಬರು ಸ್ಪರ್ಧಿಗಳು ಆಯ್ಕೆಯಾದರು.
ಬಕ್ಕಿ ಮಂಜುನಾಥ್ ಮಲೆನಾಡಿನ ಕೋಗಿಲೆ ಎಂದೇ ಸ್ಥಳೀಯ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದು, ತಾಲೂಕು ಕನ್ನಡ ಜಾನಪದ ಪರಿಷತ್‍ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರತಿಭೆ ಜಾನಪದ ಹಾಡುಗಳನ್ನು ನಿರರ್ಗಳವಾಗಿ ಇಂಪಾಗಿ ಹಾಡುವ ಪ್ರತಿಭೆಯಾಗಿದ್ದು ಬಣಕಲ್ ಹೋಬಳಿ ಕಸಾಪದ ಸಾಂಸ್ಕೃತಿಕ ರಾಯಬಾರಿಯಾಗಿದ್ದಾರೆ. ಇವರ ಸಾಧನೆ ಕನ್ನಡ ಕೋಗಿಲೆ ಶೋನಲ್ಲಿ ಉತ್ತುಂಗಕ್ಕೆ ಏರಿಸಲಿ ಎಂದು ಕನ್ನಡ ಅಭಿಮಾನಿ ಬಳಗ ಹಾರೈಸುತ್ತದೆ.
ಕಲರ್ ಸೂಪರ್ ವಾಹಿನಿಯ ‘ಕನ್ನಡ ಕೋಗಿಲೆ’ ಶೋ ಆಡಿಷನ್‍ಗೆ ಮತ್ತೋರ್ವ ಸ್ಪರ್ದಿ ಮೂಲತಃ ಕೋಲಾರದಲ್ಲಿ ನೆಲೆಸಿರುವ ಕೊಟ್ಟಿಗೆಹಾರದ ಅತ್ತಿಗೆರೆಯ ಸುಜಾತ ರಮೇಶ್ ಅವರ ಪುತ್ರ ಸುರಕ್ಷಿತ್‍ಗೌಡ ಕೂಡ ಆಯ್ಕೆಯಾಗಿದ್ದಾರೆ. ಮೂರು ಸುತ್ತಿನ ಹಾಡುಗಳ ಆಡಿಷನ್‍ನಲ್ಲಿ ಕನ್ನಡಕೋಗಿಲೆ ಶೋಗೆ ಆಯ್ಕೆಯಾಗಿದ್ದು, ಇವರ ಸಾಧನೆ ಮೇಲ್ಮಟ್ಟಕ್ಕೆ ಸಾಗಲಿ ಎಂದು ಪೋಷಕರು ಹಾಗೂ ಅಭಿಮಾನಿಗಳು ಹಾರೈಸಿದ್ದಾರೆ.

firstsuddi