ಕೊಟ್ಟಿಗೆಹಾರದ ತರುವೆಯಲ್ಲಿ ಕೃಷಿ ಇಲಾಖೆಯಿಂದ ರೈತರ ಭತ್ತದ ಕ್ಷೇತ್ರೋತ್ಸವ ಕಾರ್ಯಕ್ರಮ…

332
firstsuddi

ಮೂಡಿಗೆರೆ: ಕೃಷಿ ರೈತರು ಕೃಷಿ ಸಮಯದಲ್ಲಿ ಕೃಷಿ ಇಲಾಖೆಯಿಂದ ಉತ್ತಮ ಕೃಷಿ ತಳಿಯನ್ನು ಪಡೆದು ಉತ್ತಮ ಇಳುವರಿ ಪಡೆದುಕೊಳ್ಳಬೇಕೆಂದು ಕೃಷಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಕುಮಾರಿ ಶ್ವೇತಾ ಸಲಹೆ ಮಾಡಿದರು.
ಅವರು ಇಂದು ಸಹಾಯಕ ಕೃಷಿ ನಿರ್ದೇಶಕರಾದ ಕುಮುದಾ ಅವರ ಮಾರ್ಗದರ್ಶನದಲ್ಲಿ ಆತ್ಮ ಯೋಜನೆಯಡಿ ಕೊಟ್ಟಿಗೆಹಾರದ ತರುವೆಯಲ್ಲಿ ನಡೆದ ರೈತರ ಭತ್ತದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೃಷಿ ರೈತರು ಕೃಷಿಯನ್ನು ಅವಲಂಬಿಸಿ ಜೀವನ ಮಾಡುತ್ತಿರುವುದರಿಂದ ಕೃಷಿ ಅಧಿಕಾರಿಗಳ ಜೊತೆ ಮಾಹಿತಿ ಪಡೆದು ಸೂಕ್ತ ತಳಿಗಳನ್ನು ಪಡೆದರೆ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.ರೈತರು ಸೂಕ್ತ ಸಾವಯವ ಹಾಗೂ ರಸಗೊಬ್ಬರಗಳನ್ನು ಉಪಯೋಗಿಸಿ ಇಳುವರಿ ಹೆಚ್ಚಿಸುವ ಬಗ್ಗೆ ಚಿಂತಿಸಬೇಕು.ರೈತರು ಬಣಕಲ್ ಕೃಷಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಬೆಳೆಯ ಕುಂದು ಕೊರತೆಗಳ ಬಗ್ಗೆ ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಮಾಹಿತಿ ಪಡೆಯಬೇಕು. ಒಂದು ಎಕರೆಗೆ ಸಸಿ ಮಡಿ ಕಿತ್ತು ನಾಟಿ ಮಾಡುವುದಕ್ಕೆ 12 ರಿಂದ 13 ಕೂಲಿ ಕಾರ್ಮಿಕರು ಬೇಕಾಗುತ್ತಾರೆ.ಕಳೆ ಕೀಳಲು ಕೂಲಿ ಕಾರ್ಮಿಕರೂ ಬೇಕಾಗುತ್ತದೆ.ಸೂಕ್ತ ಕಳೆನಾಶಕ ಬಳಸುವುದರಿಂದ ಕಳೆ ಕೀಳಲು ಕೂಲಿ ಕಾರ್ಮಿಕರು ಸಂಖ್ಯೆ ಕಡಿಮೆಯಾಗುತ್ತದೆ.ಇದರಿಂದ ರೈತರಿಗೆ ತುಂಬಾ ಉಳಿತಾವಾಗುತ್ತದೆ.ಎಲ್ಲಾ ರೈತರು ಭೂಮಿಯನ್ನು ಪಾಳು ಬಿಡದೇ ಫಲವತ್ತತೆಯನ್ನು ಕಾಯ್ದುಕೊಳ್ಳಬೇಕು.ಗದ್ದೆ ನಾಟಿ ಮಾಡುವುದರಿಂದ ಗದ್ದೆ ತೇವಾಂಶ ಉಳಿದು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ತರುವೆ ರೈತ ಟಿ.ಎಸ್.ಲಕ್ಷ್ಮಣ್‍ಗೌಡ ಮಾತನಾಡಿ ಕೃಷಿ ಇಲಾಖೆಯಲ್ಲಿ ರೈತರಿಗೆ ಮಾಹಿತಿ ನೀಡಲಾಗುತ್ತದೆ.ಕೃಷಿ ಬೆಳೆಗೆ ಬರುವ ರೋಗಗಳ ಬಗ್ಗೆಯೂ ಕೃಷಿ ಅದಿಕಾರಿಗಳು ಗದ್ದೆಗಳಿಗೆ ಬೇಟಿ ನೀಡಿ ರೋಗ ಪೀಡಿತ ಬೆಳೆಗಳನ್ನು ಪರಿಶೀಲನೆ ನಡೆಸಿ ಮಾಹಿತಿ ನೀಡುತ್ತಾರೆ.ಕೃಷಿ ಅಧಿಕಾರಿಗಳು ರೈತರಿಗೆ ಆಯಾ ಗ್ರಾಮಗಳಲ್ಲಿ ಸಭೆ ನಡೆಸಿ ಉತ್ತಮ ತಳಿಗಳ ಬಗ್ಗೆ ಮಾಹಿತಿ ನೀಡಿ ಪ್ರತಿ ರೈತರಿಗೂ ಪ್ರೋತ್ಸಾಹ ನೀಡಬೇಕು.ರೈತರ ಬೆಳೆ ರೋಗ ಬಂದು ನಾಶವಾಗುವುದರ ಬಗ್ಗೆಯೂ ಸೂಕ್ತ ಪರಿಹಾರ ನೀಡಬೇಕು.ಭತ್ತದ ಬೆಳೆಯಿಂದ ರೈತರಿಗೆ ಇಳುವರಿ ಸಿಗುತ್ತಿಲ್ಲ ಎಂಬ ಕಾರಣದಿಂದ ಅನೇಕ ರೈತರು ಭತ್ತದ ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ.ಹಾಗಾಗಿ ರೈತರಿಗೆ ಸೂಕ್ತ ಮಾಹಿತಿ ಪ್ರೋತ್ಸಾಹ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ಲೆಕ್ಕ ಪರಿಶೋದಕಿ ಶೈಲಜಾ,ತರುವೆ ರೈತರಾದ ಟಿ.ಎಸ್.ಲಕ್ಷ್ಮಣ್‍ಗೌಡ, ಸುಬ್ಬಯ್ಯ, ಕಾಳಾಚಾರ್,ಸುರೇಂದ್ರ,ಬಾಲಚಂದ್ರ,ರಮೇಶ್,ರುಕ್ಮಿಣಿ,ಸುರೇಖಾ,ಹಾಲಮ್ಮ, ಶಾರದಾ, ಶ್ವೇತಾ ಮತ್ತಿತರರು ಇದ್ದರು.

firstsuddi