ಜನರ ಹಿತದೃಷ್ಟಿಯಿಂದ ಎಸ್‌ಪಿ ಮತ್ತು ಬಿಎಸ್ ಪಿ ನಡುವೆ ಮೈತ್ರಿ ಮಾಡಿಕೊಂಡಿದ್ದೇವೆ: ಮಾಯಾವತಿ…

268
firstsuddi

ಲಕ್ನೋ :ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ನಡೆಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಯಾವತಿ ಅವರು  ಬಾಬಾ ಸಾಹೇಬ ಅಂಬೇಡ್ಕರ್ ​ರವರ ಕನಸು ನನಸು ಮಾಡುತ್ತೇವೆ.ಮುಂಬರುವ ಲೋಕಸಭಾ ಚುನಾವಣೆಯನ್ನು ಎಸ್‌ಪಿ , ಬಿಎಸ್ ಪಿ ಜೊತೆಯಾಗಿ ಎದುರಿಸಲಿದ್ದು, ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿದ್ದೆಗೆಡಿಸಲಿದೆ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಹಲವು ವರ್ಷಗಳ ಕಾಲ ಅಧಿಕಾರದಲ್ಲಿತ್ತು, ಆದರೆ ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ, ಬಡತನ  ಹೆಚ್ಚಾಗಿತ್ತು.   ಜನರ ಹಿತದೃಷ್ಟಿಯಿಂದ ಎಸ್‌ಪಿ ಮತ್ತು ಬಿಎಸ್ ಪಿ ನಡುವೆ ಮೈತ್ರಿ ಮಾಡಿಕೊಂಡಿದ್ದೇವೆ. ಜನವಿರೋಧಿ ಪಕ್ಷವನ್ನು ಆಡಳಿತದಿಂದ ದೂರವಿಡುವುದು ನಮ್ಮ ಉದ್ದೇಶ. ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಹಾಗೂ ಅಲ್ಪ ಸಂಖ್ಯಾತರ ರಕ್ಷಣೆ ನಮ್ಮ ಜವಾಬ್ದಾರಿ ಎಂದು ತಿಳಿಸಿದ್ದಾರೆ .