ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಶ್ರೀಗಳ ಆಪ್ತವೈದ್ಯ ಡಾ.ಪರಮೇಶ್ ತಿಳಿಸಿದ್ದಾರೆ.ಇಂದು ಬೆಳಗ್ಗೆ ಶ್ರೀಗಳ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋಂಕಿನ ಅಂಶ ಕಡಿಮೆಯಾಗಿದೆ, ಪ್ರೊಟೀನ್ ಕೊರತೆಯುಂಟಾಗಿದೆ. ಶ್ರೀಗಳು ಸ್ವಶಕ್ತಿಯಿಂದ ಉಸಿರಾಡುತ್ತಿಲ್ಲ. ಎರಡು ಗಂಟೆ ಉಸಿರಾಡುವಷ್ಟರಲ್ಲಿ ಸುಸ್ತಾಗುತ್ತಿದ್ದಾರೆ. ಆಕ್ಸಿಜನ್ ಕೊಟ್ಟ ಬಳಿಕ ಸಹಜ ಸ್ಥಿತಿಗೆ ಮರಳುತ್ತಾರೆ ಎಂದು ತಿಳಿಸಿದ್ದಾರೆ.










