ಮೂಡಿಗೆರೆ: ಇಂದು ವೀರ ಸನ್ಯಾಸಿ,ತತ್ವಜ್ಞಾನಿ ಮತ್ತು ಆಧ್ಯಾತ್ಮಿಕ ಗುರುವಾದ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಮೂಡಿಗೆರೆ ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಎಬಿವಿಪಿ ವತಿಯಿಂದ 156ನೇ ವರ್ಷದ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಕೀಲರಾದ ಪರೀಕ್ಷಿತ್ ಜವಳಿ ಅವರು ಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ವಿಭಾಗ ಸಂಚಾಲಕರಾದ ದೀಕ್ಷಿತ್ , ತಾಲೂಕು ಸಂಚಾಲಕರಾದ ದರ್ಶನ್, ಹಾಗೂ ವಿದ್ಯಾರ್ಥಿಗಳಾದ ಕಾರ್ತಿಕ್. ಸುನಿಲ್, ಅನಿಲ್, ಸೂರಜ್, ಸೇರಿದಂತೆ ಇತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.











