ಬೆಂಗಳೂರು :ನಾಳೆಯಿಂದ ಪ್ರತಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ ನಮ್ಮ ಮೆಟ್ರೋ ಸಂಚಾರ ಆರಂಭವಾಗಲಿದೆ. ಇಷ್ಟು ದಿನ ಪ್ರತಿ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗುತ್ತಿತ್ತು, ಆದರೆ ಇನ್ನುಮುಂದೆ ಪ್ರತಿ ಭಾನುವಾರ ಮೆಟ್ರೋ ರೈಲು ಬೆಳಗ್ಗೆ 7 ಗಂಟೆಗೆ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್ಸಿಎಲ್ ಟ್ವಿಟರ್ ಖಾತೆ ಮೂಲಕ ತಿಳಿಸಿದೆ.











