ಕಾಫಿ ಕುಡಿದು ತಾಯಿ, ಮಗಳ ಸಾವು…

291
firstsuddi

ಚಿಕ್ಕಬಳ್ಳಾಪುರ: ಕಾಫಿ ಕುಡಿದು ತಾಯಿ ಹಾಗೂ ಮಗಳು ಮೃತಪಟ್ಟಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಬತ್ತಲಹಳ್ಳಿ ಗ್ರಾಮದಲ್ಲಿ ನಡೆದಿದೆ.ಅಕ್ಕಲಮ್ಮ(80) ಮತ್ತು ನರಸಮ್ಮ(60) ಮೃತ ತಾಯಿ ಮಗಳು. ಮೃತರು ಗ್ರಾಮದ ಅಂಗಡಿ ಯೊಂದರಲ್ಲಿ ಕಾಫಿಪುಡಿ ಖರೀದಿಸಿದ್ದರು ಎನ್ನಲಾಗಿದ್ದು, ಕಾಫಿ ಸೇವಿಸಿದ ನಂತರ ನಾಲ್ವರು ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಕ್ಕುಲಮ್ಮ ಮತ್ತು ನರಸಮ್ಮ ಮೃತಪಟ್ಟಿದ್ದಾರೆ. ಕಾಫಿ ಕುಡಿದಿದ್ದ ಮೃತ ನರಸಮ್ಮನ ಅವರ  ಮೊಮ್ಮಕ್ಕಳಾದ ಅರವಿಂದ್​ (7) ಮತ್ತು ಆರತಿ (5) ಅಸ್ವಸ್ಥರಾಗಿದ್ದು,  ಕೋಲಾರದ ​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಾಫಿಯಲ್ಲಿ ವಿಷ ಬೆರತಿರುವ ಶಂಕೆ ವ್ಯಕ್ತವಾಗಿದ್ದು, ಬಾಗೇಪಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.