ತರೀಕೆರೆ : ಚರ್ಚ್ ಮುಂದೇ ನಿಂತಿದ್ದ ಇನೋವಾ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ತರೀಕೆರೆಯ ಜೀವನ್ ಭೀಮಾ ನಗರದಲ್ಲಿರುವ ಪಿಲೋಸ್ ಚರ್ಚ್ ಮುಂಭಾಗ ತಡ ರಾತ್ರಿ 1 ಗಂಟೆ ವೇಳೆಯಲ್ಲಿ ನಡೆದಿದೆ. ಚರ್ಚ್ ಮುಂದೆ ಇದ್ದ ಕಬ್ಬಿಣದ ಸರಳುಗಳನ್ನು ಕಾಯಲು ಫಾದರ್ ಪೌಲೋಸ್ ಎಂಬುವರು ಕಾರಿನಲ್ಲಿ ಮಲಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಗ್ಯಾರೇಜ್ ನ ವೇಸ್ಟ್ ಬಟ್ಟೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಾರಿನ ಅಡಿಯಲ್ಲಿ ಬಿಸಾಡಿದ್ದು, ಕಾರು ಹೊತ್ತಿ ಉರಿಯುತ್ತಿರೋದನ್ನ ಕಂಡು ಕೂಡಲೇ ಫಾದರ್ ಕಾರಿನಿಂದ ಹೊರ ಬಂದಿದ್ದು, ಫಾದರ್ ನ ಕೈ ಕಾಲಿನಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










