ಹುಲಿ ದಾಳಿಗೆ ವ್ಯಕ್ತಿಯೋರ್ವ ಬಲಿ…

560
firstsuddi

ಮೈಸೂರು: ಮನೆಯ ಹೊರಗೆ ಬಂದ ವ್ಯಕ್ತಿಯೋರ್ವನನ್ನು   ಹುಲಿ ಎಳೆದೊಯ್ದು ಕೊಂದಿರುವ ಘಟನೆ  ಹೆಚ್.ಡಿ ಕೋಟೆ ತಾಲ್ಲೂಕಿನ ಮಚ್ಚೂರು ಸಮೀಪದ ಗುಂಡುಮೇಟ್ಲು ಗ್ರಾಮದಲ್ಲಿ ನಡೆದಿದೆ. ಚಿನ್ನಪ್ಪ (40) ಹುಲಿ ದಾಳಿಯಿಂದ ಮೃತಪಟ್ಟ ವ್ಯಕ್ತಿ. ಚಿನ್ನಪ್ಪ ಅವರು  ಮನೆಯ ಹೊರಗೆ  ಬಂದ ಸಂದರ್ಭದಲ್ಲಿ  ಹುಲಿ  ಅವರನ್ನು  ಎಳೆದೊಯ್ದಿದ್ದು, ಇದನ್ನು ಕಂಡ ಗ್ರಾಮಸ್ಥರ ಕಿರುಚಾಡಿದ್ದು,  ಹೆದರಿದ ಹುಲಿ ಮೃತ ದೇಹವನ್ನು ಸುಮಾರು 200 ಮೀಟರ್ ದೂರದಲ್ಲಿ  ಬಿಟ್ಟು ಹೋಗಿದೆ.