ಬೆಂಗಳೂರು: ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, ಜಾರ್ಜ್ ಫರ್ನಾಂಡಿಸ್ ನಿಧನದಿಂದ ಆಘಾತಕೀಡಾಗಿದ್ದೇನೆ. ಸಮಾಜವಾದಿ ಚಳುವಳಿಯ ನೇತಾರರಾಗಿದ್ದ ಜಾರ್ಜ್ ನನಗೆ ರಾಜಕೀಯ ಸಂಗಾತಿಯಾಗಿದ್ದದ್ದು ಮಾತ್ರವಲ್ಲ ಹಿರಿಯಣ್ಣನಂತೆ ಮಾರ್ಗದರ್ಶಕರಾಗಿದ್ದರು. ಅವರನ್ನು ಕಳೆದುಕೊಂಡ ದು:ಖ ಮಾಯುವಂತಹದ್ದಲ್ಲ. ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.











