ಬಿಜೆಪಿ ಇಂಗು ತಿಂದ ಮಂಗನಂತೆ ಆಡುತ್ತಿದೆ: ಸಿದ್ದರಾಮಯ್ಯ…

356
firstsuddi

ಬೆಂಗಳೂರು : ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಳೆ ಎಲ್ಲ ಅತೃಪ್ತ ಶಾಸಕರು ಸದನಕ್ಕೆ ಬರುತ್ತಾರೆ ಎಂಬ ನಂಬಿಕೆಯಿದೆ. ಶಾಸಕರು ಗೈರಾದರೆ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಲಾಗುವುದು. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ನಂಬಿಕೆ ಇಲ್ಲ. ನಂಬಿಕೆ ಇದ್ದಿದ್ದರೆ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸುತ್ತಿರಲಿಲ್ಲ. ಬಿಜೆಪಿ ಆಪರೇಷನ್​ ಕಮಲ ಮಾಡುತ್ತಿರುವುದು ನಿಜ. ನಮ್ಮ ಕೆಲ ಶಾಸಕರು ಹಣ ಪಡೆದಿದ್ದಾರೆ. ಕಾಂಗ್ರೆಸ್​ ಶಾಸಕರಿಗೆ ಬಿಜೆಪಿ 30 ಕೋಟಿ ರೂ. ಆಫರ್​ ಕೊಟ್ಟಿದೆ. ಸೂಕ್ತ ಸಮಯದಲ್ಲಿ ಅವನ್ನು ಬಿಡುಗಡೆ ಮಾಡಲಾಗುವುದು. ಸಮ್ಮಿಶ್ರ ಸರಕಾರಕ್ಕೆ ಸಂಖ್ಯಾಬಲ ಇಲ್ಲ ಎಂದರೆ ಅವಿಶ್ವಾಸ ಮಂಡಿಸಲಿ. ಬಿಜೆಪಿ ಇಂಗು ತಿಂದ ಮಂಗನಂತೆ ಆಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ