ಮೂಡಿಗೆರೆ: ಅಲೇಖಾನ್ ಹೊರಟಿ ಎನ್. ಹೆಚ್ 234ರ ರಸ್ತೆ ಬದಿ ಅಪರಿಚಿತ ಮಹಿಳೆ ಶವ ಪತ್ತೆ…  

1206
firstsuddi

ಮೂಡಿಗೆರೆ: ಅಪರಿಚಿತ ಮಹಿಳೆಯೋರ್ವರ ಶವ  ಚಾರ್ಮಾಡಿ ಘಾಟ್ ಸಮೀಪದ ಅಲೇಖಾನ್ ಹೊರಟಿ ಎನ್. ಹೆಚ್ 234ರ ರಸ್ತೆ ಬದಿ ಸುಮಾರು 30 ಅಡಿ ಆಳದ  ಪ್ರಪಾತದಲ್ಲಿ ಶವ ಪತ್ತೆಯಾಗಿದ್ದು, ಸುಮಾರು 30 ವರ್ಷದ ಮಹಿಳೆಯ ಶವ ಎನ್ನಲಾಗಿದೆ. ಒಂದು ವಾರದ ಹಿಂದೆ ಮಹಿಳೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು,  ಮೃತ ಮಹಿಳೆ ಹಸಿರು ಬಣ್ಣದ ಟಾಪ್ , ಹಸಿರು ಬಣ್ಣದ ಲೆಗ್ಗಿನ್ಸ್,  ಹಾಗೂ ಕಪ್ಪು ಬಣ್ಣದ ವೇಲ್ ಧರಿಸಿರುವುದು ಕಂಡು ಬಂದಿದೆ. ಮೂಡಿಗೆರೆ ಸರ್ಕಲ್ ಇನ್ ಸ್ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಮೊ.ನಂ 17/2019 ಖಾಲಂ 302,201 ಐಪಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಮಹಿಳೆ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.