ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಲ್ಮನೆ ಲೋಕೇಶ್ ಕುಟುಂಬದವರಿಂದ ಆಗ್ರಹ…

2181
firstsuddi

ಮೂಡಿಗೆರೆ : ಶಾಸಕ ಎಂ.ಪಿ.ಕುಮಾರಸ್ವಾಮಿಯವರು ನನ್ನ ಹೆಸರಿನಲ್ಲಿರುವ 5 ಎಕರೆ ಜಮೀನು ಕಬಳಿಸಲು ಸಂಚು ರೂಪಿಸಿರುವುದಲ್ಲದೆ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ 60 ಮೂಟೆ ಕಾಫಿ ಕಳವು ಮಾಡಿಸಿದ್ದಾರೆಂದು ಕಲ್ಮನೆ ಗ್ರಾಮದ ಲೋಕೇಶ್ ಹಾಗೂ ಅವರ ಕುಟುಂಬದವರು ಆರೋಪಿಸಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಬಾಳೂರು ಹೋಬಳಿ ಕಲ್ಮನೆ ಗ್ರಾಮದಲ್ಲಿ .ನಂ.49ರಲ್ಲಿ 5 ಎಕರೆ ಜಮೀನು ಹೊಂದಿದ್ದು, ಜಮೀನು 1981-82ಸಾಲಿನಲ್ಲಿ ತನ್ನ ತಂದೆ ಸಿದ್ದಯ್ಯರಿಗೆ ಫಾರಂ ನಂ. 53ರಲ್ಲಿ ಮಂಜೂರಾಗಿದ್ದು ತಂದೆಯ ಮರಣದ ಬಳಿಕ ತನ್ನ ಹೆಸರಿಗೆ ಬಂದಿದೆ. ಜಮೀನಿನಲ್ಲಿ ಕಳೆದ 30 ವರ್ಷಗಳಿಂದ ಕಾಫಿ ಸಾಗುವಳಿ ಮಾಡಿಕೊಂಡು ಬಂದಿದ್ದು, ಕಳೆದ ಎರಡು ವರ್ಷಗಳಿಂದ ಇದೇ .ನಂ.49ರಲ್ಲಿರುವ ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಶಿವರಾಜ್ ಗೌಡ ಎಂಬುವರು ಅದನ್ನು ಮೂಡಿಗೆರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಅವರಿಗೆ ಮಾರಾಟ ಮಾಡಿರುತ್ತಾರೆ
ಕುಮಾರಸ್ವಾಮಿಯವರ ಒತ್ತುವರಿ ಜಮೀನು ನನ್ನ ಜಮೀನಿಗೆ ಹೊಂದಿಕೊಂಡಂತಿದ್ದು, ಅವರು ತಮ್ಮ ರಾಜಕೀಯ ಅಧಿಕಾರ ಬಳಸಿ  ನನ್ನ ಹಸರಿನಲ್ಲಿರುವ ಜಮೀನನ್ನು ಅಕ್ರಮವಾಗಿ ಕಬಳಿಸಲು ಸಂಚು ಹಾಕಿದ್ದಾರೆ ಎಂದು ಲೋಕೇಶ್ ಕುಟುಂಬದವರು ಆರೋಪಿಸಿದ್ದಾರೆ.  ಕಳೆದ 2018, ಡಿ.21ರಂದು ಶಾಸಕರ ಕಡೆಯ ಸುಮಾರು 200 ಮಂದಿ ಏಕಾಏಕಿ ತನ್ನ ಜಮಿನಿಗೆ ಅಕ್ರಮ ಪ್ರವೇಶ ಮಾಡಿ 60 ಚೀಲ ಕಾಫಿ ಕೊಯ್ದು ಕದ್ದೊಯ್ದಿದ್ದಾರೆ. ಇದನ್ನು ಪ್ರಶ್ನಿಸಿದಾಗ ತನಗೂ ಹಾಗೂ ನನ್ನ ಪತ್ನಿ ಮಕ್ಕಳಿಗೆ ಹಲ್ಲೆ ಮಾಡುವ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಇದರ ವಿರುದ್ಧ ಬಾಳೂರು ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಎಸ್ಪಿಗೆ ದೂರು ನೀಡಿದಾಗ ಕಾನೂನು ಕ್ರಮದ ಭರವಸೆ ನೀಡಿದ್ದಾರೆಂದು ಲೋಕೇಶ್ ತಿಳಿಸಿದರು.
ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆ ಹಕ್ಕುಪತ್ರ , ಬ್ಯಾಂಕ್ ಸಾಲಪತ್ರ ಇದ್ದಾಗ್ಯು ಶಾಸಕ ಕುಮಾರಸ್ವಾಮಿ ತಮ್ಮ ಅಧಿಕಾರ ,ರಾಜಕೀಯ ಪ್ರಭಾವ ಬಳಸಿ ನನ್ನ ಜಮೀನು ಕಬಳಿಸುವ ಸಲುವಾಗಿ ಕುಟುಂಬದ ಮೇಲೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ. ಮನೆ ಕಟ್ಟುವ ಸಂದರ್ಭ ಶಿವರಾಜ್ ಗೌಡನ ಮೂಲಕ ಕಿರುಕುಳ ನೀಡಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ಪೊಲೀಸರು ರಕ್ಷಣೆ ನೀಡಬೇಕು. ಕಾಫಿ ಕಳವು ಮಾಡಿದ ಹಾಗೂ ಜಮಿನಿಗೆ ಅಕ್ರಮ ಪ್ರವೇಶ ಮಾಡಿದ ಶಾಸಕ ಕುಮಾರಸ್ವಾಮಿ ಹಾಗೂ ಅವರ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲೋಕೇಶ್ ಅಗ್ರಹಿಸಿದ್ದು, ತನಗೆ ನ್ಯಾಯ ಒದಗಿಸಲು ಜಿಲ್ಲಾಡಳಿತ ವಿಫಲವಾದಲ್ಲಿ ಬಾಳೂರು ಪೊಲೀಸ್ ಠಾಣೆ ಎದುರು ಫೆ.18ರಿಂದ ಕುಟುಂಬದವರೊಂದಿಗೆ ಹಗಲು ರಾತ್ರಿ ಧರಣಿ ಕೂರುವುದಾಗಿ ಅವರು ಎಚ್ಚರಿಸಿದ್ದಾರೆ.