ಯೋಧರ ಮೇಲೆ ದಾಳಿ ಖಂಡಿಸಿ ಮೂಡಿಗೆರೆಯಲ್ಲಿ ಪ್ರತಿಭಟನೆ…

578

ಮೂಡಿಗೆರೆ: ಜಮ್ಮುವಿನ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಭಾರತದ ಯೋಧರು ಹುತಾತ್ಮರಾಗಿದ್ದು, ಯೋಧರ ಮೇಲೆ ನಡೆದ ದಾಳಿ ಖಂಡಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾಕಾರರು ಉಗ್ರರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಲಯನ್ಸ್ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಬಳಿಕ ಪಾಕಿಸ್ತಾನದ ಬಾವುಟವನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ ರತನ್ ಕುಮಾರ್, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿನೋದ್ ಕಣಚೂರು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪ್ರಮೋದ್, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಭಾರತ್ ಕನ್ನೇಹಳ್ಳಿ,  ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧನಿಕ್, ಬಿಜೆಪಿ ಮುಖಂಡರಾದ ಜನ್ನಾಪುರ ರಘು, ಸಂಜಯ್ ಕೊಟ್ಟಿಗೆಹಾರ, ಪರೀಕ್ಷಿತ್ ಜವಳಿ, ಆದರ್ಶ್ ತರುವೆ, ಪ್ರವೀಣ್ ಪೂಜಾರಿ, ಬಾಲಚಂದ್ರ , ಅನಿಲ್, ಸೇರಿದಂತೆ ಇತರರು ಇದ್ದರು .