ಕೊಪ್ಪ:ವಿದ್ಯುತ್ ತಂತಿ ತಗುಲಿ ಗರ್ಭಿಣಿ ಕಾಡೆಮ್ಮೆ ಸಾವು…

303
firstsuddi

ಚಿಕ್ಕಮಗಳೂರು : ವಿದ್ಯುತ್ ತಂತಿ ತಗುಲಿ ಗರ್ಭಿಣಿ ಕಾಡೆಮ್ಮೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಬೆಟ್ಟದಕುಮಾರಿ ಎಸ್ಟೇಟ್ ಬಳಿ ನಡೆದಿದೆ. ಜೋತುಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಡೆಮ್ಮೆ ಮೃತಪಟ್ಟಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯುತ್ ಇಲಾಖೆ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.