ಏರೋ ಇಂಡಿಯಾ 2019; ಚಾಲನೆ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್…

220

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ನಡೆಯಲಿರುವ ‘ಏರ್​ ಶೋ ಇಂಡಿಯಾ 2019’ ಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದರು.ಕೇಂದ್ರ ವಾಣಿಜ್ಯ ಖಾತೆ ಸಚಿವ ಸುರೇಶ್ ಪ್ರಭು, ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಎಚ್‌ಎಎಲ್‌, ಡಿಆರ್‌ಡಿಒ, ದೇಶದ ಮೂರು ಸೇನಾಪಡೆಗಳ ಹಿರಿಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ದೇಶೀಯ ವಿಮಾನಗಳು,ವಿದೇಶಿ ವಿಮಾನಗಳು ಹಾಗೂ ಐಎಎಫ್‌ನ ವಿಮಾನಗಳು ಏರ್‌ ಶೋನಲ್ಲಿ ಚಮತ್ಕಾರ ತೋರಿಸಲಿವೆ.