ಸಿ.ಟಿ ರವಿಯವರು ಕಾಫೀ, ಟೀ, ಹಾಲನ್ನೇ ಕುಡಿಯುದಿಲ್ಲ ಇನ್ನು ಮದ್ಯ ಕುಡಿಯುತ್ತಾರಾ..? ಪಲ್ಲವಿ ಸಿ.ಟಿ ರವಿ…

1017
firstsuddi

ಚಿಕ್ಕಮಗಳೂರು : ಮಧ್ಯರಾತ್ರಿ ಕುಣಿಗಲ್ ಸಮೀಪ ಶಾಸಕ ಸಿ.ಟಿ ರವಿ ಅವರು ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಟಿ ರವಿ ಅವರ ಪತ್ನಿ ಪಲ್ಲವಿ ಅವರು ಶಾಸಕ ಸಿ.ಟಿ ರವಿ ಅವರು ಕಾಫಿ , ಟೀ ಹಾಲನ್ನೇ ಕುಡಿಯುವುದಿಲ್ಲ. ಇನ್ನು ಮದ್ಯ ಸೇವೆನೆ ಮಾಡುತ್ತಾರೆಯೇ? ಕಳೆದ 18 ವರ್ಷಗಳಿಂದ ಸಿ.ಟಿ ರವಿ ಅವರು ಕಾಫಿ, ಟೀ ಹಾಲು ಕುಡಿಯುವುದನ್ನು ಬಿಟ್ಟಿದ್ದಾರೆ. ಅವರು ನೀರು ಬಿಟ್ಟು ಬೇರೇನೂ ಕುಡಿಯುವುದಿಲ್ಲ. ಅವರು ವಾಹನ ಚಲಾಯಿಸುವುದನ್ನು ಬಿಟ್ಟು 15ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಬಹುಶಃ ಅವರಿಗೆ ಈಗ ಕಾರು ಚಾಲನೆ ಮಾಡುವುದೇ ಮರೆತು ಹೋಗಿದೆ ಎಂದರು.
ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿರುವುದು ತೀವ್ರ ನೋವುಂಟು ಮಾಡಿದೆ. ಈ ಅಪಘಾತ ಆಕಸ್ಮಿಕ. ಶೀಘ್ರದಲ್ಲಿಯೇ ಮೃತಪಟ್ಟ ಕುಟುಂಬಗಳ ಮನೆಗೆ ತೆರಳಿ ಸಾಂತ್ವನ ಹೇಳುತ್ತೇವೆ. ಅವರುಗಳಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ನಮ್ಮಲ್ಲಿ 3 ಜನ ಕಾರು ಚಾಲಕರು ಕೆಲಸ ಮಾಡುತ್ತಿದ್ದಾರೆ. ಒಬ್ಬ ಚಾಲಕ ಶಿವಮೊಗ್ಗಕ್ಕೆ ಹೋಗಿ ಆಗಷ್ಟೇ ಬಂದಿದ್ದರು. ಅವರಿಗೆ ವಿಶ್ರಾಂತಿ ನೀಡಿ ಮತ್ತೊಬ್ಬ ಚಾಲಕರನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಅವರೇ ಕಾರನ್ನು ಓಡಿಸುತ್ತಿದ್ದರು. ಬೆಳಿಗ್ಗೆ 6 ಗಂಟೆಗೆ ವಿಮಾನದಲ್ಲಿ ಸಿ.ಟಿ ರವಿಯವರು ಚೆನ್ನೈಗೆ ತೆರಳಬೇಕಿದ್ಧ ಹಿನ್ನಲೆ ರಾತ್ರಿ 12 ಗಂಟೆಗೆ ಬೆಂಗಳೂರಿಗೆ ಹೊರಟಿದ್ದರು ಎಂದು ಪಲ್ಲವಿ ರವರು ತಿಳಿಸಿದರು.