ನಮ್ಮ ಪ್ರಾಕೃತಿಕ ಸಂಪತ್ತಿನ ರಕ್ಷಣೆಯ ಹೊಣೆ ನಮ್ಮ ಕೈಯಲ್ಲಿದೆ:ನಟ ಗಣೇಶ್…

423
firstsuddi

ಬೆಂಗಳೂರು: ಬಂಡೀಪುರ ಅರಣ್ಯದಲ್ಲಿ ಕಾಳ್ಗಿಚ್ಚು ಉಂಟಾಗಿದ್ದು, ಅರಣ್ಯ ಪ್ರದೇಶದ ಸಹಸ್ರಾರು ಎಕರೆ ಭೂಮಿಯಲ್ಲಿದ್ದ ಮರಗಿಡಗಳು, ವಾಸವಾಗಿದ್ದ ಪ್ರಾಣಿ ಪಕ್ಷಿಗಳು ಸುಟ್ಟು ಕರಕಲಾಗಿವೆ. ಇದಕ್ಕೆ ಸಂಬಂಧಿಸಿದಂತೆ ನಟ ಗಣೇಶ್ ಅವರು ಟ್ವಿಟ್ ಮಾಡಿದ್ದು, ಬಂಡೀಪುರ ಅರಣ್ಯದಲ್ಲಿನ ಕಾಡ್ಗಿಚ್ಚಿನಿಂದ ನಮ್ಮ ಅಮೂಲ್ಯವಾದ ಅರಣ್ಯ ಸಂಪತ್ತು,ವನ್ಯಜೀವಿಗಳು ಸಂಕಷ್ಟಕ್ಕೀಡಾಗಿದ್ದು ತುಂಬಾ ನೋವಾಗಿದೆ. ಅರಣ್ಯ ಇಲಾಖೆ ಹಾಗೂ ಸ್ವಯಂ ಸೇವಕರು ಕಾರ್ಯನಿರತರಾಗಿರುವುದು ಶ್ಲಾಘನೀಯ. ಇತ್ತೀಚೆಗೆ ಸಂಭವಿಸುತ್ತಿರುವ ಅಗ್ನಿ ಅನಾಹುತಗಳು ವಿಷಾದನೀಯ. ನಮ್ಮ ಪ್ರಾಕೃತಿಕ ಸಂಪತ್ತಿನ ರಕ್ಷಣೆಯ ಹೊಣೆ ನಮ್ಮ ಕೈಯಲ್ಲಿದೆ ಎಂದು ಗಣೇಶ್ ಅವರು ಟ್ವಿಟ್ ಮಾಡಿದ್ದಾರೆ.