ಅರಣ್ಯ ಇಲಾಖೆ ಹಾಗೂ ಸ್ವಯಂಸೇವಕರ ಜೊತೆ ನಾವು ನಮ್ಮ ಸಹಾಯ ಹಸ್ತವನ್ನ ನೀಡೋಣ :ನಟ ಪುನೀತ್…

142
firstsuddi

ಬೆಂಗಳೂರು:  ಬಂಡೀಪುರ ಅರಣ್ಯದಲ್ಲಿ ಕಾಳ್ಗಿಚ್ಚು ಉಂಟಾಗಿದ್ದು, ಅರಣ್ಯ ಪ್ರದೇಶದ ಸಹಸ್ರಾರು ಎಕರೆ ಭೂಮಿಯಲ್ಲಿದ್ದ ಮರಗಿಡಗಳು, ವಾಸವಾಗಿದ್ದ ಪ್ರಾಣಿ ಪಕ್ಷಿಗಳು ಸುಟ್ಟು ಕರಕಲಾಗಿವೆ. ಇದಕ್ಕೆ ಸಂಬಂಧಿಸಿದಂತೆ ನಟ ಪುನೀತ್ ರಾಜ್ ಕುಮಾರ್ ರವರು ಟ್ವಿಟ್ ಮಾಡಿದ್ದು, ಬಂಡೀಪುರ ಅರಣ್ಯ ದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ವನ್ಯ ಜೀವಿಗಳು ಮತ್ತು ಅರಣ್ಯ ಸಂಪತ್ತು ಸಂಕಷ್ಟಕ್ಕೀಡಾಗಿದೆ ಅರಣ್ಯ ಇಲಾಖೆ ಹಾಗೂ ಸ್ವಯಂಸೇವಕರ ಜೊತೆ ನಾವು ನಮ್ಮ ಸಹಾಯಹಸ್ತವನ್ನ ನೀಡೋಣ..”ಕಾಡಿದ್ದರೆ-ನಾಡು,ನಾವು” ವನ್ಯಜೀವಿಗಳ ರಕ್ಷಣೆ ನಮ್ಮ ಹೊಣೆ!ಮನುಷ್ಯನ ಹಾಗೆ ಗಿಡ ಮರ ಮತ್ತು ವನ್ಯಜೀವಿಗಳು ಒಂದು ಜೀವವೇ ಎಂದು ಟ್ವಿಟ್ ಮಾಡಿದ್ದಾರೆ.