ಚಿಕ್ಕಮಗಳೂರು:ಕೊಡಗಿನ ನೆರೆ ಸಂತ್ರಸ್ಥರಿಗೆ ರಾಜ್ಯ ಸರ್ಕಾರಕ್ಕಿಂತ ಮೊದಲೇ ಲಯನ್ಸ್ ಜಿಲ್ಲಾ ಘಟಕ ನೂರು ಮನೆಗಳನ್ನು ನಿರ್ಮಿಸಿ ನೀಡಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ದೇವದಾಸ್ ಭಂಡಾರಿ ಹೇಳಿದರು.
ನಗರದ ಲಯನ್ಸ್ ಸೇವಾ ಭವನದಲ್ಲಿ ಇತ್ತೀಚೆಗೆ ನಡೆದ ಲಯನ್ಸ್ ಮತ್ತು ಲಯನೆಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗಿನಲ್ಲಿ ನೆರೆ ಸಂಭವಿಸಿದ ತಕ್ಷಣ ಲಯನ್ಸ್ ಜಿಲ್ಲಾ ಘಟಕದಿಂದ ಸಂತ್ರಸ್ಥರಿಗೆ ಆಹಾರ ಔಷಧಿ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಅಗತ್ಯ ವಸ್ತುಗಳನ್ನು ವಿತರಿಸಲಾಗಿದ್ದು, ಪ್ರಕೃತಿ ವಿಕೋಪದಲ್ಲಿ ನಿರ್ಗತಿಕರಾಗಿರುವವರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಈಗಾಗಲೇ ರೂಪರೇಷೆ ತಯಾರಿಸಲಾಗಿದೆ ಎಂದರು.
ಉಪರಾಜ್ಯಪಾಲ ಡಾ|| ಗೀತಾಪ್ರಕಾಶ್ ಮಾತನಾಡಿ ಲಯನ್ಸ್ ಸಂಸ್ಥೆಗೆ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಸಿ.ಪಿ.ಸುರೇಶ್ ಕಳೆದ 45 ವರ್ಷಗಳಿಂದ ಲಯನ್ಸ್ ಸಂಸ್ಥೆ ಬುದ್ದಿಮಾಂದ್ಯ ಮಕ್ಕಳ ಶಾಲೆ ನಡೆಸುವುದೂ ಸೇರಿದಂತೆ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ರಾಜ್ಯಪಾಲ ದೇವದಾಸ್ ಭಂಡಾರಿ ದಂಪತಿಯನ್ನು ಸಮಾರಂಭದಲ್ಲಿ ಲಯನ್ಸ್ ಮತ್ತು ಲಯನೆಸ್ ವತಿಯಿಂದ ಸನ್ಮಾನಿಸಲಾಯಿತು.
ಲಯನ್ಸ್ ಕಾರ್ಯದರ್ಶಿ ಮನೋಜ್ ಬಸವರಾಜ್, ಲಯನೆಸ್ ಕಾರ್ಯದರ್ಶಿ ಮೋಹನಕುಮಾರಿ, ಸಂಸ್ಥೆಯ ವಾರ್ಷಿಕ ವರದಿಯನ್ನು ಮಂಡಿಸಿದರು.
ರಾಜ್ಯಪಾಲರ ಜಿಲ್ಲಾ ಪ್ರತಿನಿಧಿ ಹೆಚ್.ಸಿ.ಶಶಿಪ್ರಸಾದ್, ಪ್ರಾಂತ್ಯಾಧ್ಯಕ್ಷ ಹೆಚ್.ಎಂ.ತಾರಾನಾಥ್, ವಲಯಾಧ್ಯಕ್ಷ ನಾಗರಾಜಯ್ಯ, ನಿಕಟಪೂರ್ವ ರಾಜ್ಯಪಾಲ ಹೆಚ್.ಆರ್.ಹರೀಶ್, ಸುಖಲತಾ ಭಂಡಾರಿ, ಲಯನೆಸ್ ಅಧ್ಯಕ್ಷೆ ಲಕ್ಷ್ಮೀ ನಂಜಯ್ಯ, ಖಜಾಂಚಿ ಶಾಂತಿ ಅಪ್ಪಯ್ಯ, ಬಾಲಕೃಷ್ಣೇಗೌಡ, ಲಯನ್ಸ್ ಖಜಾಂಚಿ ಜಯರಾಮೇಗೌಡ, ಪ್ರೊ|| ಹೆಚ್.ಎಸ್.ಜಗಧೀಶಪ್ಪ, ಪ್ರೊ|| ಎಸ್.ಆರ್.ವೈದ್ಯ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಕೊಡಗಿನ ನೆರೆ ಸಂತ್ರಸ್ಥರಿಗೆ ರಾಜ್ಯ ಸರ್ಕಾರಕ್ಕಿಂತ ಮೊದಲೇ ಲಯನ್ಸ್ ಜಿಲ್ಲಾ ಘಟಕ ನೂರು ಮನೆಗಳನ್ನು ನಿರ್ಮಿಸಿ...










