ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಬಿಜೆಪಿ ಟ್ವಿಟ್ ಮೂಲಕ ತಿರುಗೇಟು ನೀಡಿದ್ದು, ಕರ್ನಾಟಕದಲ್ಲಿ ಒಬ್ಬರು ಬಿಳಿ ಅಂಗಿ ಬಿಳಿ ಪಂಚೆ ತೊಟ್ಟ ಮಾಜಿ ಮುಖ್ಯಮಂತ್ರಿ ಒಬ್ಬರು ಇದ್ದಾರೆ ನೋಡೋಕೆ ತುಂಬಾ ಸಂಭಾವಿತರ ರೀತಿ ಕಾಣುತ್ತಾರೆ ಆದರೆ ಸಭೆ ಸಮಾರಂಭಗಳಲ್ಲಿ ದುಶ್ಯಾಸನ ತರ ಹೆಣ್ಣುಮಕ್ಕಳ ಸೆರಗು ಎಳೆಯುತ್ತಾರೆ, ಸಾಮಾನ್ಯರ ತರ ಕಾಣುತ್ತಾರೆ ಆದರೆ ಕೋಟಿ ಬೆಲೆ ಬಾಳೋ ವಾಚ್ ಕಟ್ಟುತ್ತಾರೆ. ಯಾರಿವರು ಗೊತ್ತೇ? ಎಂದು ಬಿಜೆಪಿ ಕರ್ನಾಟಕ ಟ್ವಿಟ್ ಮಾಡಿದೆ.











