ಒತ್ತಡದ ಬದುಕಿನಿಂದ ದೂರಾಗಿ ಆರೋಗ್ಯಯುಕ್ತ ಜೀವನ ನಡೆಸಲು ಹೀಗೆ ಮಾಡಿ, ಫಲಿತಾಂಶ ನೋಡಿ….

1369

ಫಸ್ಟ್ ಸುದ್ದಿ : ಆರೋಗ್ಯಯುತವಾದ ಸುಂದರ ಜೀವನ ನಡೆಸಬೇಕು ಅನ್ನೋದು ಎಲ್ಲರ ಆಸೆ. ಪ್ರತಿಯೊಬ್ಬರು ಖುಷಿಯಿಂದ ಆರೋಗ್ಯಯುಕ್ತ ಜೀವನ ನಡೆಸಲು ಆರೋಗ್ಯ, ಜೀವನ ಶೈಲಿ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರವೆ. ಆದರೆ, ದಿನ ನಿತ್ಯ ನಾವು ಮಾಡುವ ಸಣ್ಣ ತಪ್ಪುಗಳು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಮನಸ್ಸು ಸದಾ ಭಾರವಾಗಿರುತ್ತೆ. ಯಾವುದರ ಮೇಲೂ ಆಸಕ್ತಿ ಇರೋದಿಲ್ಲ. ನೋಡೋಣ, ಮಾಡೋಣ ಅಂತಾನೇ ದಿನದೂಡಿ ಸಂಜೆ ಮತ್ತೆ ಈ ದಿನ ಪೂರ್ತಿ ಹಾಳಾಯ್ತು ಎಂದು ಮತ್ತೆ ಕೊರಗುತ್ತೀರಾ. ಎಷ್ಟೊ ಮಂದಿಗೆ ರಾತ್ರಿ ನಿದ್ದೆಯೇ  ಬರೋದಿಲ್ಲ. ನಾಳೆ ಏನ್ ಮಾಡೋದು ಅಂತಾ ಚಿಂತೆ ಮಾಡ್ತಾರೆ. ನಾಳೆ ಮತ್ತೆ ಅದೇ ಯಥಾಸ್ಥಿತಿ ಮುಂದುವರೆಯುತ್ತೆ. ಅದಕ್ಕೆ ಪ್ರತಿಯೊಬ್ಬರು ಕೆಲ ಟಿಪ್ಸ್ ಗಳನ್ನ ಬಳಸೋದು ಮುಖ್ಯ.

ನಮ್ಮ ನಾಳೆ ಸುಂದರವಾಗಿರಬೇಕು ಅಂದ್ರೆ ನಾವು ಇಂದು ಈ ಉಪಾಯಗಳನ್ನ ಪಾಲಿಸಬೇಕು. ನಾವು ದಿನ ಈ ರೀತಿ ಮಾಡಿದ್ರೆ ನಮ್ಮ ನಾಳೆ, ನಾಡಿದ್ದು ಎಲ್ಲವೂ ಚೆನ್ನಾಗಿರುತ್ತೆ. ಜೀವನ, ಆರೋಗ್ಯದ ಬಗ್ಗೆ ಭಯವೂ ಇರಲ್ಲ. ಚಿಂತೆಯೂ ಇರೋಲ್ಲ.

ಊಟದ ತಕ್ಷಣ ಮಲಗಬೇಡಿ : ಬಹುತೇಕರು ಮಾಡುವ ತಪ್ಪಿದು. ರಾತ್ರಿ ಕ್ರಿಕೆಟ್, ಧಾರಾವಾಹಿ,ಸಿನಿಮಾ ಅಂತಾ ಟಿವಿ ನೋಡ್ಕೊಂಡು ಊಟ ಮಾಡಿ ತಕ್ಷಣ ಮಲಗಿಬಿಡ್ತಾರೆ. ನೈಟ್ ಡಿನ್ನರ್ ಆದ ಕೂಡಲೇ ಮಲಗಬೇಡಿ. ಸ್ವಲ್ಪ ಹೊತ್ತು ವಾಕ್‌ ಮಾಡಿ, ಇಲ್ಲವಾದಲ್ಲಿ ಪ್ರಶಾಂತವಾದ ಜಾಗದಲ್ಲಿ ವಜ್ರಾಸನದಲ್ಲಿ ಕುಳಿತುಕೊಳ್ಳಿ.

ಮೆದುಳು ಫ್ರೀಯಾಗಿರಲಿ : ರಾತ್ರಿ ಊಟದ ನಂತರ ಕನಿಷ್ಠ ಪಕ್ಷ ಒಂದೂವರೆಯಿಂದ ಎರಡು ಗಂಟೆಯ ನಂತರ ಮಲಗಿ. ಅಲ್ಲಿಯವರೆಗೆ ವಾಕ್ ಮಾಡಿ, ಇಲ್ಲ ನಿಮಗಿಷ್ಟವಾದ ಪುಸ್ತಕವನ್ನು ಓದಿ, ಅದೂ ಆಗಲಿಲ್ಲವಾ ಇಷ್ಟವಾದ ಹಾಡನ್ನ ಕೇಳಿ. ಇದರಿಂದ ನಿಮ್ಮ ಮೆದುಳು ಆರಾಮಾಗಿರುತ್ತೆ.

ಪ್ರಾರ್ಥನೆ ಮಾಡಿ : ಮಲಗಿದ ಕೂಡಲೇ ನೀವು ಏನೇ ಮಾಡಿ. ಆದ್ರೆ, ನಿದ್ದೆಗೆ ಜಾರುವ ಮುನ್ನ ಒಂದು ಸಣ್ಣ ದೇವರ ಸ್ತುತಿ ಹಾಡಿ. ಇದರಿಂದ ರಾತ್ರಿ ಕೆಟ್ಟ ಕನಸು ಬೀಳುವುದಿಲ್ಲ. ಬೆಳಗ್ಗೆದ್ದು ಆ ಕನಸನ್ನ ನೆನೆದು ಏನಾಗುತ್ತೋ ಏನೋ ಅಂತಾ ಕೊರಗುವ ಗೋಜಿಗೆ ಹೋಗುವಂತಿರಲ್ಲ. ರೂಂನಲ್ಲಿ ಸಣ್ಣದೊಂದು ಮ್ಯೂಸಿಕ್ ಇದ್ರೆ ನೆಮ್ಮದಿಯಾಗಿ ಮಲಗಿ ನೆಮ್ಮದಿಯಾಗಿ ಏಳಬಹುದು. ಬೇಗನೆ ಸುಖ ನಿದ್ದೆ ಬರುತ್ತೆ.

ಮಲಗುವ ಸಮಯ :  ಪ್ರತಿಯೊಬ್ಬರ ಜೀವನದಲ್ಲೂ ಇದು ಬಹುಮುಖ್ಯ. ಬೇಗ ಮಲಗಿ, ಬೇಗ ಏಳೋದು ಒಳ್ಳೆದು. ಒಳ್ಳೆ ಅಭ್ಯಾಸ. ಆ ದಿನ ಲವಲವಿಕೆಯಿಂದ ಕೂಡಿರತ್ತೆ. ಆದ್ರೆ, ರಾತ್ರಿ ಲೇಟ್ ಮಲಗಿದೆ ಅಂತಾ ಲೇಟಾಗಿ ಎದ್ರೆ, ಆ ದಿನ ಸಂಜೆ ನಿಮ್ಮ ಸಾಧನೆ ಶೂನ್ಯ. ಆ ಒಂದು ಮತ್ತೆಂದೂ ವಾಪಸ್ ಬರಲ್ಲ. ಯಾವ ಮನುಷ್ಯ ಸೂರ್ಯೋದಯದ ನಂತರ ಏಳುತ್ತಾನೋ ಆ ದಿನವಿಡಿ ಆತ ಆಯಾಸದಿಂದಿರುತ್ತಾನೆ. ಅದಕ್ಕೆ ಬೇಗ ಮಲಗಿ, ಬೇಗ ಏಳಿ. ದಿನವಿಡಿ ಪಾದರಸದಂತಿದ್ದು ನಿಮ್ಮ ಕೆಲಸ ಕಾರ್ಯಗಳನ್ನ ಉನ್ನತ ಸ್ಥಾನ ಗಳಿಸಿ.

 

LEAVE A REPLY

Please enter your comment!
Please enter your name here