ನಿಮ್ಮ ಮತ ಅಸ್ತ್ರವಿದ್ದಂತೆ ಯೋಚಿಸಿ ಮತ ಹಾಕಿ: ಪ್ರಿಯಾಂಕ ಗಾಂಧಿ…

133
firstsuddi

ಗಾಂಧಿನಗರ: ಚುನಾವಣಾ ಪ್ರಚಾರ  ಸಭೆ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ 2 ಕೋಟಿ ಉದ್ಯೋಗ ಸೃಷ್ಠಿ ಹಾಗೂ 15 ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆ ಈಗ ಏನಾಯಿತು. ನಿಮ್ಮ ಮತ ಅಸ್ತ್ರವಿದ್ದಂತೆ ಯೋಚಿಸಿ ಮತ ಹಾಕಿ. ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ.ಈ ದೇಶ ಪ್ರೀತಿ ಹಾಗೂ ಸಹೋದರತ್ವದ ಮೇಲೆ ನಿಂತಿದೆ. ಆದರೆ ಈಗ ದೇಶದಲ್ಲಿ ಏನಾಗುತ್ತಿದೆ ಬಹಳ ದುಃಖದ ಸಂಗತಿ. ಈ ದೇಶದಲ್ಲಿ ಜಾಗೃತಿಗಿಂತ ಅತಿ ದೊಡ್ಡ ದೇಶಭಕ್ತಿ ಯಾವುದೂ ಇಲ್ಲ ಎಂದಿದ್ದಾರೆ.