ಚಿಕ್ಕಮಗಳೂರು : ಚುನಾವಣೆ ಸಮೀಪಿಸುತ್ತಿದ್ದಂತೆ ಕಾಫಿನಾಡಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಕೇಳಿ ಬರುತ್ತಿದೆ. ಕಳಸ, ಬಾಳೆಹೊಳೆ ಹಾಗೂ ಕೊಪ್ಪ ತಾಲ್ಲೂಕಿನ ಮೊದಲಮನೆ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಈ ಬಾರಿ ಮತದಾನದಿಂದ ದೂರ ಉಳಿಯುವ ತೀರ್ಮಾನವನ್ನು ಗ್ರಾಮಸ್ಥರು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಾರಿ ಮತದಾನ ಮಾಡುವುದಿಲ್ಲ ಎಂಬ ಫೋಟೋ ವೈರಲ್ ಆಗಿದೆ. ಈ ಗ್ರಾಮಗಳು 200 ಕ್ಕೂ ಹೆಚ್ಚು ಮತದಾರನ್ನು ಹೊಂದಿರುವ ಗ್ರಾಮಗಳಾಗಿದ್ದು, ಚುನಾವಣೆ ದಿನಾಂಕ ನಿಗದಿಯಾದ 3 ದಿನದಲ್ಲಿ ಮತ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದು, ಗ್ರಾಮದ ಮುಂಭಾಗ ಬಹಿಷ್ಕಾರದ ಬ್ಯಾನರ್ ಕಟ್ಟಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.










