ಚಿಕ್ಕಮಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ರಾಜಕಾರಣಿಗಳ ಟೆಂಪಲ್ ರನ್ ಮುಂದುವರೆದಿದ್ದು, ಇಂದು ಬೆಳಿಗ್ಗೆ ಬಿಜೆಪಿ ರಾಜ್ಯಾಧ್ಯ
ಕ್ಷ ಬಿ.ಎಸ್ ಯಡಿಯೂರಪ್ಪ ಅವರು ಶೃಂಗೇರಿ ಶಾರದಾಂಬೆ ದರ್ಶನ ಪಡೆದಿದ್ದಾರೆ. ಇಂದು ಸಂಜೆ ಶೃಂಗೇರಿ ಶಾರದಾಂಬೆ ದರ್ಶನ ಪಡೆಯಲು ಸಚಿವ ರೇವಣ್ಣ, ಪತ್ನಿ ಭವಾನಿ, ಪುತ್ರ ಪ್ರಜ್ವಲ್ ರೇವಣ್ಣ ಅವರು ಶೃಂಗೇರಿಗೆ ಆಗಮಿಸುತ್ತಿದ್ದು, ಕಳೆದ ವಾರವಷ್ಟೆ ಹೆಚ್.ಡಿ ದೇವೇಗೌಡ ಅವರು ನಿಖಿಲ್ ಗಾಗಿ ಯಾಗ ನಡೆಸಿದ್ದು, ಮನಸ್ಸಿನಾಸೆ ಈಡೇರಿಕೆಗಾಗಿ ಚಂಡಿಕಾಯಾಗವನ್ನು ದೇವೇಗೌಡರು ನಡೆಸಿದ್ದರು. ಅಂದು ರೇವಣ್ಣ ದಂಪತಿ ಶೃಂಗೇರಿಗೆ ಆಗಮಿಸಿರಲಿಲ್ಲ. ನಿನ್ನೆ ಅಭ್ಯರ್ಥಿ ಅಧಿಕೃತ ಘೋಷಣೆ ಹಿನ್ನೆಲೆ ರೇವಣ್ಣ ಕುಟುಂಬ ಪ್ರಜ್ವಲ್‍ಗಾಗಿ ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಲಿದ್ದು, 7 ಗಂಟೆಗೆ ಹಿಂದಿರುಗಲಿದ್ದಾರೆ ಎಂದು ತಿಳಿದು ಬಂದಿದೆ.










