ಚಿಕ್ಕಮಗಳೂರು :ಶ್ರೀ ಗಂಗಾ ಪರಮೇಶ್ವರಿ ದೇವಿಯ ದೇವಾಲಯ ಲೋಕಾರ್ಪಣೆ…

255
firstsuddi

ಚಿಕ್ಕಮಗಳೂರು : ಗಂಗಾ ಮತಸ್ಥ ಸಮುದಾಯ ಇಲ್ಲಿನ ಗಾಂಧಿನಗರದಲ್ಲಿ ಜೀರ್ಣೋದ್ದಾರಗೊಳಿಸಿರುವ ಪುರಾತನ ಶ್ರೀ ಗಂಗಾ ಪರಮೇಶ್ವರಿ ದೇವಿಯ ದೇವಾಲಯ ಸಹಸ್ರಾರು ಭಕ್ತರ ನಡುವೆ ಸೋಮವಾರ ಲೋಕಾರ್ಪಣೆಗೊಂಡಿತು.
ದೇವಾಲಯದ ಉದ್ಘಾಟನೆ ಅಂಗವಾಗಿ ಬಿಂಬಶುದ್ದಿ, ನವಗ್ರಹ, ವಾಸ್ತುಹೋಮ ಸೇರಿದಂತೆ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

firstsuddi

ಸೋಮವಾರ ಬೆಳಿಗ್ಗೆ ಪ್ರವೇಶೋತ್ಸವದ ನಂತರ ಶ್ರೀ ಗಂಗಾಪರಮೇಶ್ವರಿಯ ನೂತನ ವಿಗ್ರಹದ ಪ್ರತಿಷ್ಠಾಪನೆ, ಅಭಿಷೇಕ, ವಿಶೇಷ ಪೂಜೆ, ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಗಂಗಾಮತಸ್ಥ ಸಮುದಾಯದ ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಕುಲದೈವ ಶ್ರೀ ಗಂಗಾಪರಮೇಶ್ವರಿಗೆ ಪೂಜೆ ಸಲ್ಲಿಸಿದರು.