ಸಚಿವ ಎಚ್.ಡಿ ರೇವಣ್ಣ ಆಪ್ತರ ನಿವಾಸದ ಮೇಲೆ ಐಟಿ ದಾಳಿ…

191
firstsuddi

ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರ ಆಪ್ತರ ನಿವಾಸದ ಮೇಲೆ ಐಟಿ  ದಾಳಿ ನಡೆದಿದೆ. ಎಚ್.ಡಿ ರೇವಣ್ಣ ಅವರ ಆಪ್ತರಾದ ಅಶ್ವಥ್ ನಾರಾಯಣ್ ರೆಡ್ಡಿ, ರಾಯಗೌಡ ಸೇರಿದಂತೆ  ಮೂವರ ನಿವಾಸದ ಮೇಲೆ ದಾಳಿ ನಡೆಸಿ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಮತ್ತು  ಮೈಸೂರಿನ ವಿಜಯನಗರದಲ್ಲಿರುವ ಪುಟ್ಟರಾಜು ಅಣ್ಣನ ಮಗ ಅಶೋಕ್ ನಿವಾಸದ ಮೇಲೆಯೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.