ದೇಶದಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ : ಶೋಭ ಕರಂದ್ಲಾಜೆ…

186
firstsuddi

ಚಿಕ್ಕಮಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸಂಸದೆ ಶೋಭ ಕರಂದ್ಲಾಜೆ ಅವರು ಮಂಡ್ಯದಲ್ಲಿ 4 ಜನ ಸುಮಲತಾ ಎಂಬುವವರು ಕಣದಲ್ಲಿದ್ದು, ಇದು ನನಗೆ ಆಶ್ಚರ್ಯ ತಂದಿದೆ. ನೇರವಾಗಿ ಚುನಾವಣೆ ಎದುರಿಸದೆ ವಾಮಮಾರ್ಗದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜನತಾದಳ ವಿರೋಧಿ ಅಲೆ ಉಂಟಾಗಿದ್ದು, ನಿಖಿಲ್ ಹಾಗೂ ಪ್ರಜ್ವಲ್ ಅವರ ಪರ ಜನ ನಿಲ್ಲುವುದಿಲ್ಲ. ಕುಟುಂಬ ರಾಜಕಾರಣವನ್ನು ಜನರು ಒಪ್ಪುವುದಿಲ್ಲ. ದೇಶದಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ ಎಂದು ಹೇಳಿದ್ದಾರೆ.