ಹಾಸನ ಹೊಸ ಎಸ್ಪಿಯಾಗಿ ಡಾ.ಚೇತನ್ ಸಿಂಗ್ ರಾಥೋರ್ ನೇಮಕ…

309
firstsuddi

ಹಾಸನ : ಡಿಸಿ ನಂತರ ಹಾಸನ ಎಸ್ಪಿಯೂ ದಿಢೀರ್ ವರ್ಗಾವಣೆಗೊಂಡಿದ್ದಾರೆ. 2009ರ ಲೋಕಸಭಾ ಚುನಾವಣೆ ವೇಳೆ ಚನ್ನಪಟ್ಟಣ ಜೆಡಿಎಸ್ ಮುಖಂಡರ ಮನೆಯಲ್ಲಿ ಅಕ್ರಮ ಹಣ ಸಿಕ್ಕಿತ್ತು. ಅಲ್ಲಿ ಡಿಎಸ್ಪಿಯಾಗಿದ್ದ ಪ್ರಕಾಶ್ ಗೌಡ ಅವರು ಸೂಕ್ತ ಕ್ರಮ ಕೈಗೊಳ್ಳದ ಆರೋಪಕ್ಕೆ ಗುರಿಯಾಗಿದ್ದರು. ಈ ಸಂಬಂಧ ಪ್ರಕಾಶ್ ಗೌಡ ವಿರುದ್ದ ಅಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ತನಿಖೆ ನಂತರ ಪ್ರಕಾಶ್ ಗೌಡ ಅವರು ಅಮಾನತ್ತಾಗಿದ್ದರು. ನಂತರ ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಪ್ರಕಾಶ್ ಗೌಡ ಅವರು ದೂರು ದಾಖಲಿಸಿದ್ದರು. ಚನ್ನಪಟ್ಟಣದಂತೆ ಹಾಸನವೂ ಜೆಡಿಎಸ್ ಪ್ರಾಬಲ್ಯ ಜಿಲ್ಲೆ. ಹೀಗಾಗಿ ಎಸ್ಪಿ ಅವರನ್ನು ವರ್ಗ ಮಾಡುವಂತೆ ಬಿಜೆಪಿ ಮನವಿ ಮಾಡಿದ್ದು, ಅದರಂತೆ ಹೊಸ ಎಸ್‍ಪಿಯಾಗಿ ಡಾ.ಚೇತನ್‍ಸಿಂಗ್ ರಾಥೋರ್ ಅವರನ್ನು ನೇಮಕ ಮಾಡಲಾಗಿದೆ. ಕಳೆದ ವಾರವಷ್ಟೆ ಹಾಸನ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ವರ್ಗಾವಣೆಗೊಂಡಿದ್ದರು.