ಮೂಡಿಗೆರೆ : ನಕ್ಸಲ್ ಪೀಡಿತ ಪ್ರದೇಶ ಗುಳ್ಯ ಗ್ರಾಮದಲ್ಲಿಚುನಾವಣಾ ಬಹಿಷ್ಕಾರ…

173
firstsuddi

ಚಿಕ್ಕಮಗಳೂರು : ನಕ್ಸಲ್ ಪೀಡಿತ ಪ್ರದೇಶದಲ್ಲಿ ಚುನಾವಣಾ ಬಹಿಷ್ಕಾರ ಮಾಡಲಾಗಿದ್ದು, ಕೆಲ ತಿಂಗಳ ಹಿಂದೆ ನಕ್ಸಲರು ಭೇಟಿ ನೀಡಿದ ಮೂಡಿಗೆರೆ ತಾಲ್ಲೂಕಿನ ಗುಳ್ಯ ಗ್ರಾಮದಲ್ಲಿ ಮೂಲಭೂತ ಸೌಲಭ್ಯದ ಕೊರತೆ ಹಿನ್ನಲೆಯಲ್ಲಿ ಲೋಕಸಭಾ ಚುನಾವಣಾ ಮತದಾನದಿಂದ ದೂರ ಉಳಿಯುವ ನಿರ್ಧಾರವನ್ನು ಗ್ರಾಮಸ್ಥರು ತೆಗೆದುಕೊಂಡಿದ್ದು, 32 ಮನೆಗಳು ಹಾಗೂ 100ಕ್ಕೂ ಹೆಚ್ಚು ಜನರಿಗೆ ಮತದಾನ ಹಕ್ಕು ಹೊಂದಿರುವ ಗುಳ್ಯ ಗ್ರಾಮದ ರಸ್ತೆ ಮುಂಭಾಗದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.