ಮೂಡಿಗೆರೆ : ಲೋಕಸಭೆಯ ಚುನಾವಣೆಯ ಪ್ರಯುಕ್ತ ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡುವ ಕುರಿತು ಸರ್ಕಾರಿ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸ್ವಯಂಸೇವಕರು ವಿವಿಧ ರೀತಿಯಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಿ ಮತದಾನವನ್ನು ಪ್ರತಿಯೊಬ್ಬರು ಮಾಡಿ ಪ್ರಜಾಪ್ರಭುತ್ವ ವ್ಯವಸ್ತೆಯಡಿ ನಮಗೆ ಬೇಕಾದ ವ್ಯಕ್ತಿಯನ್ನು ನಾವೇ ಆರಿಸುವ ಸ್ವತಂತ್ರ ಇದಾಗಿದ್ದು ಇದರ ಸುವರ್ಣಾವಕಾಶವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳುವ ಅನೇಕ ಕಾರ್ಯಕ್ರಮವನ್ನು ಮಾಡಿ ಮತದಾನದ ಕುರಿತು ಜನರಲ್ಲಿ ತಿಳಿಏಳುವ ಕಾರ್ಯಕ್ರಮ ಎಲ್ಲೆಲ್ಲೂ ನಾವು ಕೇಳುತ್ತಿರುವುದು ಸಹಜ.
ಆದರೆ ಮೂಡಿಗೆರೆಯ ತಾಲ್ಲೂಕು ಕಛೇರಿಯಲ್ಲಿ ಸೇವೆಸಲ್ಲಿಸುತ್ತಿರುವ ಗುರುರಾಜ್ ಹಾಲ್ಮಟ್ ರವರು ತನ್ನ ಫೇಸ್ ಬುಕ್ ಪೋಸ್ಟಿನಲ್ಲಿ ವಿನೂತನ ರೀತಿಯಲ್ಲಿ ಮತದಾನ ಮಾಡುವ ಕುರಿತು ಪೋಸ್ಟ್ ಮಾಡಿದ್ದು ಇದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು ಇದು ಹೇಗೆ ಸಾದ್ಯ ಎಂದು ಯೋಚಿಸುವವರು ಈ ಪೋಸ್ಟಿನಲ್ಲಿ ಇರುವ ಬರಹವನ್ನು ಗಮನಿಸಿದರೆ ಇದನ್ನು ಪೋಸ್ಟ್ ಮಾಡಿದವರಿಗೆ ಒಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಅದೇನೆಂದರೆ ಇದೀಗ ಪ್ರೌಡಾವಸ್ತೆ ತಲುಪಿ ಮೊದಲ ಮತದಾನ ಮಾಡುವ ಯುವಕ ಯುವತಿಯರಿಗೆ ಈ ದೇಶದ ಬಗ್ಗೆ ಅಪಾರ ಕಾಳಜಿ ಇರುತ್ತದೆ. ಇವರ ಕಾಳಜಿಗೆ ಹಾಗೂ ತಮ್ಮ ಮೊದಲ ಮತವು ಈ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ.
ಇಂತಹ ಸೂಕ್ಷ್ಮವಾದ ವಿಷಯದ ಕುರಿತು ಆಲೋಚಿಸಿದ ಗುರುರಾಜ್ ಹಾಲ್ಮಟ್ ತನ್ನ ಫೇಸ್‍ಬುಕ್ ಖಾತೆಯ ಪೋಸ್ಟಿನಲ್ಲಿ ಮೊದಲ ಮತದಾನ ಮಾಡುವವರು ತಲಾ ಒಂದೊಂದು ಗಿಡವನ್ನು ನೆಡಿ ಈ ಗಿಡನೆಡುವ ಮೂಲಕ ನಿಮ್ಮ ಮೊದಲ ಮತದಾನವನ್ನು ಮಾಡಿ ಗಿಡ ನೆಡುವ ಮೂಲಕ ಪ್ರಾರಂಭಿಸಿ. ಮತ್ತು ನೀವು ಮಾಡಿದ ಮತದಿಂದ ವಿಜಯಿಶಾಲಿಯಾದ ವ್ಯಕ್ತಿ ನಿಮಗೆ ನೆರಳಾಗಬಹುದು ಅಥವಾ ಆಗದೇ ಇರಬಹುದು? ಆದರೆ ನೀವು ನೆಟ್ಟ ಗಿಡ 5 ವರ್ಷ ಕಳೆದರೆ ನಿಮಗೆ ಖಂಡಿತವಾಗಿಯೂ ನೆರಳನ್ನು ಕೊಡುತ್ತದೆ ಎಂಬಂತಹ ಪೋಸ್ಟ್ ಫೇಸ್‍ಬುಕ್ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದ್ದು ಇದೂ ಒಂದು ಹೊಸ ಸಮಾಜಮುಖಿ ಆಂದೋಲನ ಎಂದರೆ ತಪ್ಪಾಗಲಾರದು.










