ಚಿಕ್ಕಮಗಳೂರು : ಎಂಇಎಸ್ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 86 ರಷ್ಟು ಫಲಿತಾಂಶ

210

ಚಿಕ್ಕಮಗಳೂರು : ನಗರದ ಮಲೆನಾಡು ವಿದ್ಯಾಸಂಸ್ಥೆಯ ಸುಂದರಮ್ಮ ಶಂಕರಮೂರ್ತಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 86 ರಷ್ಟು ಫಲಿತಾಂಶ ಗಳಿಸಿದೆ.
257 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಅವರಲ್ಲಿ 221 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಉನ್ನತ ಶ್ರೇಣಿಯಲ್ಲಿ 48, ಪ್ರಥಮ ಶ್ರೇಣಿಯಲ್ಲಿ 125, ದ್ವಿತೀಯ ಶ್ರೇಣಿಯಲ್ಲಿ 36 ಹಾಗೂ ತೃತೀಯ ಶ್ರೇಣಿಯಲ್ಲಿ 12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿ ಆಯಿಷಾ ಸಿದ್ದಿಕಾ 579, ವಿಜ್ಞಾನ ವಿಭಾಗದಲ್ಲಿ ಗಾನಿಯಾ ಗುಲ್ಫಂ 571, ಕಲಾ ವಿಭಾಗದಲ್ಲಿ ಬಿ.ಆರ್.ಉದಯ್ 542 ಅಂಕಗಳನ್ನು ಗಳಿಸಿದ್ದಾರೆ.
ಲೆಕ್ಕ ಶಾಸ್ತ್ರದಲ್ಲಿ ವಿದ್ಯಾರ್ಥಿಗಳಾದ ಆಯಿಷಾ ಸಿದ್ದಿಕಾ, ಎಂ ಅದಿತಿ, ಎಂ.ಯು.ಕೃತ್ತಿಕಾ, ವ್ಯವಹಾರ ಅಧ್ಯಯನದಲ್ಲಿ ಡಿ.ಎಂ.ಜೀವನ್, ದಿವಿನಾ ಪ್ರಿನ್ಸಿಟಾ ಸಾಲ್ಡಾನಾ, ವಿ.ಬಿ.ಶಾಂಭವಿ ಹಾಗೂ ಸಂಖ್ಯಾ ಶಾಸ್ತ್ರದಲ್ಲಿ ಜಿಯಾ ಜೈನ್ ಶೇ.100 ಅಂಕ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯೆ ಎಂ.ಬಿ.ಜಯಶ್ರೀ ತಿಳಿಸಿದ್ದಾರೆ.