ಶಿವಮೊಗ್ಗ : ಚುನಾವಣಾ ಪ್ರಚಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಶೂನ್ಯ. 5ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ರೈತರ ಒಳಿತಿಗೂ ಪ್ರಧಾನಿ ನರೇಂದ್ರ ಮೋದಿಯವರು ಏನೂ ಮಾಡಿಲ್ಲ. ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅವರು ಪೊಳ್ಳು ಭಾಷಣ ಮಾಡಿಕೊಂಡು ಬಂದಿದ್ದಾರೆ. ಪೊಳ್ಳು ಭಾಷಣ ಮಾಡುವುದರಿಂದ ಜನರು ಮರಳಾಗುವುದಿಲ್ಲ. ಬಿಜೆಪಿಯವರು ಭದ್ರತೆಯ ದೃಷ್ಠಿಯಿಂದ ಮತ ಕೇಳುತ್ತಿದ್ದಾರೆ. ಆದರೆ ದೇಶಕ್ಕೆ ಈ ವರೆಗೂ ಯಾವಾ ನಾಯಕರೂ ಅಭದ್ರತೆ ಕೊಟ್ಟಿಲ್ಲ. ಮೋದಿಯವರು ತಾನೇ ಭದ್ರತೆ ಕೊಟ್ಟಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ಎಷ್ಟೇ ಪ್ರಯತ್ನ ಮಾಡಿದರೂ ಕಣ್ಣೀರು ಬರುವುದಿಲ್ಲ. ಈ ಬಗ್ಗೆ ಅವರಲ್ಲೇ ಕೇಳಬೇಕು ಎಂಬ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಹೇಳಿಕೆಗೆ ಪ್ರತಿಕ್ರಯಿಸಿದ ಕುಮಾರಸ್ವಾಮಿ ಅವರು ಭಾನೆಗಳು ಹಾಗೂ ಜನರ ಕಷ್ಟ ಗೊತ್ತಿದ್ದರೆ ಕಣ್ಣೀರು ಬರುವುದು ಸಹಜ. ಮಾಜಿ ಮುಖ್ಯಮಂತ್ರಿಗಳಿಗೆ ಕಣ್ಣೀರಿನ ಅರ್ಥ ಗೊತ್ತಿಲ್ಲ. ಪಾಠ ಹೇಳಿಸಿಕೊಂಡು ಕಣ್ಣೀರು ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.










