ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಯೋಜನೆಯನ್ನು ಕಾರ್ಮಿಕ ವರ್ಗಕ್ಕೆ ಅನುಷ್ಟಾನಗೊಳಿಸಬೇಕು : ಹೆಚ್.ಹೆಚ್. ದೇವರಾಜ್…

319
firstsuddi

ಚಿಕ್ಕಮಗಳೂರು : ಸಂವಿಧಾನ ಶಿಲ್ಪಿ ಡಾ. ಬಿ.ಅರ್. ಅಂಬೇಡ್ಕರ್ ಅವರ ಕನಸಾದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಯೋಜನೆಯನ್ನು ಕಾರ್ಮಿಕ ವರ್ಗಕ್ಕೆ ಅನುಷ್ಟಾನಗೊಳಿಸಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್. ದೇವರಾಜ್ ಸಲಹೆ ಮಾಡಿದರು.
ಜೆಡಿಎಸ್ ಕಾರ್ಮಿಕ ವಿಭಾಗದ ಜಿಲ್ಲಾ ಘಟಕ ನಗರದ ಪಕ್ಷದ ಕಚೇರಿಯಲ್ಲಿ ಬುಧವಾರ ಎರ್ಪಡಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ದಿಯಲ್ಲಿ ಕಾರ್ಮಿಕರ ಪಾತ್ರ ಪ್ರಮುಖವಾದುದು, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳೂ ಬೆಳೆಯಲು ಕಾರ್ಮಿಕರ ಶ್ರಮ ಪ್ರಮುಖ ಕಾರಣ. ಯಾವುದೇ ರಾಷ್ಟ್ರ ಅಥವಾ ಯಾವುದೇ ಕ್ಷೇತ್ರ ಕಾರ್ಮಿಕರಿಲ್ಲದೆ ಅಭಿವೃದ್ದಿಯಾಗಲು ಸಾಧ್ಯವಿಲ್ಲ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ ಸರ್ಕಾರಗಳು ಯಂತ್ರಗಳ ಬಳಕೆಯನ್ನು ಕಡಿಮೆ ಮಾಡಿ ಕಾರ್ಮಿಕರನ್ನು ಬಳಸಿಕೊಳ್ಳುವ ಮೂಲಕ ಅವರ ಬದುಕಿಗೆ ಭದ್ರತೆ ಒದಗಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮಾನು ಮಿರಾಂಡ ಮುಂದಿನ ದಿನಗಳಲ್ಲಿ ಕಾರ್ಮಿಕ ದಿನಾಚರಣೆಯನ್ನು ಅದ್ದೂರಿಯಾಗಿ ಅಚರಿಸಲಾಗುವುದು ಎಂದು ತಿಳಿಸಿದರು.
ಕಾರ್ಮಿಕರಾದ ಲಕ್ಷ್ಮೀ ಮತ್ತು ಸಾಹಿನಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಪಕ್ಷದ ಮುಖಂಡರಾದ ಮಂಜಪ್ಪ, ಎಂ.ಡಿ.ರಮೇಶ್, ಹೊಲದಗದ್ದೆ ಗಿರೀಶ್, ಜಿ.ಎಸ್.ಚಂದ್ರಪ್ಪ, ಸೋಮೇಗೌಡ, ಲಕ್ಷ್ಮಣ್, ಚಿದಾನಂದ್, ವಿನಯ್ ರಾಜ್, ಜಯರಾಜ್ ಅರಸ್, ಖಾಲೀದ್ ಅಹಮ್ಮದ್, ಇರ್ಷಾದ್, ವಿನಯ್ ಕೋಟೆ ಉಪಸ್ಥಿತರಿದ್ದರು.