ಚಿಕ್ಕಮಗಳೂರು : ವಿಶ್ವಕರ್ಮ ಜನಾಂಗ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಆ ಸಮುದಾಯದ ಜನ ಸಂಘಟಿತರಾಬೇಕು : ಜಗದೀಶಾಚಾರ್…

234
firstsuddi

ಚಿಕ್ಕಮಗಳೂರು : ವಿಶ್ವಕರ್ಮ ಜನಾಂಗ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಆ ಸಮುದಾಯದ ಜನ ಸಂಘಟಿತರಾಬೇಕು ಎಂದು ವಿಶ್ವಕರ್ಮ ರಾಜಕೀಯ ಕ್ರಿಯಾ ಸಮಿತಿಯ ರಾಜ್ಯ ಸಂಚಾಲಕ ಜಗದೀಶಾಚಾರ್ ಸಲಹೆ ಮಾಡಿದರು.
ಮೂಡಿಗೆರೆಯ ವಿಶ್ವಕರ್ಮ  ಟ್ರಸ್ಟ್ ನ ಭವನದಲ್ಲಿ ಭಾನುವಾರ ವಿಶ್ವಕರ್ಮ ಯಜ್ಞದ ಅಂಗವಾಗಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಎಲ್ಲಾ ಸಮುದಾಯಗಳೂ ಸಮಾಜದ ಮುಖ್ಯವಾಹಿನಿಗೆ ಬಂದಿವೆ, ಸರ್ಕಾರಗಳ ಸವಲತ್ತುಗಳನ್ನು ಪಡೆದುಕೊಳ್ಳುತ್ತಿವೆ ಆದರೆ ವಿಶ್ವಕರ್ಮ ಜನಾಂಗ ಮಾತ್ರ ಸರ್ಕಾರಗಳ ಕಣ್ಣಿಗೆ ಬೀಳದೆ ಮೂಲೆಗುಂಪಾಗಿದೆ ಎಂದು ವಿಷಾದಿಸಿದ ಅವರು ಇದಕ್ಕೆಲ್ಲಾ ಮೂಲ ಕಾರಣ ಸಮುದಾಯದ ಜನ ಸಂಘಟಿತರಾಗದೆ ಇರುವುದು ಎಂದರು.
ಯಾವುದೇ ಜನಾಂಗ ಅಭಿವೃದ್ದಿಯಾಗಬೇಕಾದರೆ ಆ ಸಮುದಾಯದ ಜನ ಒಗ್ಗೂಡಿ ಸಂಘಟಿತರಾಗಬೇಕು, ಹಾಗಾಗದಿದ್ದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದಿಲ್ಲ ಎಂದ ಅವರು ವಿಶ್ವಕರ್ಮ ಜನಾಂಗ ಸಂಪೂರ್ಣ ಮೂಲೆ ಗುಂಪಾಗುವ ಮುನ್ನ ಈಗಲಾದರೂ ಎಚ್ಚೆತ್ತುಕೊಳ್ಳಬೇಕು, ಆ ವರ್ಗದ ಜನ ಉಪಜಾತಿಗಳಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘಟಿರಾಗಬೇಕು, ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದುವರೆಯಬೇಕು ಎಂದು ಕಿವಿಮಾತು ಹೇಳಿದರು.
ಅಸಂಘಟಿತ ಕಾರ್ಮಿಕರಿಗಾಗಿ ರಾಜ್ಯ ಸರ್ಕಾರ ಒದಗಿಸುತ್ತಿರುವ ಸವಲತ್ತುಗಳನ್ನು ವಿಶ್ವಕರ್ಮ ಜನಾಂಗದ ಕಾರ್ಮಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವಕರ್ಮ ಟ್ರಸ್ಟ್ ನ ಅಧ್ಯಕ್ಷ ಡಿ.ದಿನಕರ್ ಆಚಾರ್ಯ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ವಿಶ್ವಕರ್ಮ ರಾಜಕೀಯ ಕ್ರಿಯಾ ಸಮಿತಿ ರಾಜ್ಯ ಸಂಚಾಲಕ ಜಗದೀಶಾಚಾರ್, ದಾನಿಗಳಾದ ಪ್ರದೀಪಾಚಾರ್ಯ ಮತ್ತು ಗಜೇಂದ್ರಾಚಾರ್ಯ ಅವರುಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭಕ್ಕೆ ಮುನ್ನ ವಿಶ್ವಕರ್ಮ ಯಜ್ಞ ನಡೆಯಿತು, ವಿಶ್ವಕರ್ಮ ಟ್ರಸ್ಟ್ ನ ಕಾರ್ಯದರ್ಶಿ ಸಿ.ವಿಶುಕುಮಾರ್, ವಿಶ್ವಕರ್ಮ ಬ್ರಾಹ್ಮಣ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎನ್.ಚಂದ್ರಯ್ಯಾಚಾರ್ಯ, ನಿವೃತ್ತ ಶಿಕ್ಷಕ ವಿ.ರೂಡಾಚಾರ್, ಅರುಣ್ ಶರ್ಮ, ವಿಶ್ವಕರ್ಮ ಸಂಘದ ರಾಜ್ಯ ಕಾರ್ಯದರ್ಶಿ ವಿಶ್ವನಾಥಾಚಾರ್ಯ, ಉಮಾಶಂಕರ್ ಉಪಸ್ಥಿತರಿದ್ದರು.