ಬೆಂಗಳೂರು : ರಾಜರಾಜೇಶ್ವರಿನಗರದಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಗೃಹಿಣಿಯ ಸಾವಿನ ಹಿಂದೆ ಹಲವಾರು ಅನುಮಾನಗಳು ಹುಟ್ಟಿಕೊಂಡಿದೆ. ಮಂಜುಳಾ (27) ಮೃತ ಮಹಿಳೆ. ಮಂಜುಳಾ ಅವರು ಮೂರು ವರ್ಷದ ಹಿಂದೆ ಗಿರೀಶ್ ಎಂಬುವವರನ್ನು ಮದುವೆಯಾಗಿದ್ದರು ಎಂದು ತಿಳಿದು ಬಂದಿದ್ದು, ವರದಕ್ಷಿಣೆಗಾಗಿ ಗಿರೀಶ್ ಹಾಗೂ ಅವರ ಮನೆಯವರು ಸೇರಿ ಕೊಲೆ ಮಾಡಿದ್ದಾರೆ ಎಂದು ಮೃತಾ ಮಂಜುಳಾ ಅವರ ಸಂಬಂಧಿಕರು ಆರೋಪಿಸಿದ್ದಾರೆ. ಘಟನೆ ಕುರಿತು ರಾಜರಾಜೇಶ್ವವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










