ದೇವೇಗೌಡರ ಹುಟ್ಟುಹಬ್ಬದ ಆಚರಣೆ ವೇಳೆ ಮನದ ನೋವು ಹೇಳಿಕೊಂಡ ಭವಾನಿ ರೇವಣ್ಣ…

211
firstsuddi

ಹಾಸನ : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ದೇವೇಗೌಡರ ಸೊಸೆ ಭವಾನಿ ಅವರು ವೃದ್ದಾಶ್ರಮದಲ್ಲಿರುವ ಹಿರಿಯ ಜನರನ್ನು ಕಂಡು ಮನದ ನೋವನ್ನು ಹೇಳಿಕೊಂಡಿದ್ದು, ನಾನು ಎಲ್ಲಾ ಇದ್ದೂ ತಬ್ಬಲಿನೆ, ನಾನು ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದೇನೆ. ನಮಗೆ ಅಧಿಕಾರ ಇದೆ, ನಮ್ಮ ಬಳಿ ಜನರಿದ್ದಾರೆ. ಆದರೆ ತಂದೆ ತಾಯಿ ಪ್ರೀತಿ ಇಲ್ಲ. ಹೀಗಾಗಿ ನಾನು ಒಂದು ರೀತಿಯಲ್ಲಿ ಅನಾಥೆ. ಇಂತಹ ಒಳ್ಳೆಯ ಕಾರ್ಯಗಳಿಂದ ನಮ್ಮ ನೋವನ್ನು ಮರೆಯಬೇಕು. ನಮ್ಮ ನಮ್ಮ ಹುಟ್ಟುಹಬ್ಬ ಆಚರಿಸುವುದರಲ್ಲಿ ನಮಗೆ ಖುಷಿ ಇರುವುದಿಲ್ಲ. ಹಾಗಾಗಿ ಇಂದು ನಾವು ದೇವೇಗೌಡ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದೇವೆ. ನಮ್ಮ ಬಳಿ ಕಷ್ಟ ಎಂದು ಬಂದವರನ್ನು ನಾನೆಂದು ವಾಪಸ್ ಕಳುಹಿಸುವುದಿಲ್ಲ. ಮುಂದೆಯು ನಾನು ನನ್ನ ಶಕ್ತಿಮೀರಿ ಜನರ ಕೆಲಸ ಮಾಡುತ್ತೇನೆ ಎಂದು ಹೇಳಿದರು.