ಇದು ಕೇವಲ ಎಕ್ಸಿಟ್ ಪೋಲ್, ಎಕ್ಸಾಕ್ಟ್ ಪೋಲ್ ಅಲ್ಲ : ಹೆಚ್.ಡಿ ಕುಮಾರಸ್ವಾಮಿ…

217
firstsuddi

ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಎಕ್ಸಿಟ್ ಪೋಲ್ ಕುರಿತು ತಮ್ಮ ಟ್ವಿಟರ್ ಮೂಲಕ ಪ್ರತಿಕ್ರಯಿಸಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಕೇವಲ ಒಂದು ಪಕ್ಷ ಪರವಾಗಿ ವರಧಿಯನ್ನು ತೋರಿಸುತ್ತಿದೆ. ಎಲ್ಲಾ ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಇವಿಎಂ ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವು. ಇದಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಎಕ್ಸಿಟ್ ಪೋಲ್ ದೇಶದಲ್ಲಿ ಮೋದಿ ಅಲೆ ಇದೆ ಎಂಬುವುದನ್ನು ತೋರಿಸುವುದಕ್ಕೆ ಅಷ್ಟೇ ಸೀಮಿತ. ಕಾಲ್ಪನಿಕವಾಗಿ ಮೋದಿ ಅಲೆ ಹೆಚ್ಚು ದಿನ ಇರುವುದಿಲ್ಲ. ಬಹುಮತದ ಕೊರತೆಯಾದರೆ ಎಕ್ಸಿಟ್ ಪೋಲ್ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಸೆಳೆಯುವ ಯತ್ನ ಮಾಡಲಾಗುತ್ತಿದೆ. ಬಿಜೆಪಿ ಪಕ್ಷ ಎಕ್ಸಿಟ್ ಪೋಲ್ ಮೂಲಕ ವೇದಿಕೆಯನ್ನು ಸಿದ್ದಪಡಿಸುತ್ತಿದೆ. ಇದು ಕೇವಲ ಎಕ್ಸಿಟ್ ಪೋಲ್, ಎಕ್ಸಾಕ್ಟ್ ಪೋಲ್ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.