ಮಾವಿನ ಫಸಲು ತನಗೂ ಬೇಕೆಂದ ಹೆತ್ತಮ್ಮನಿಗೆ ಮಗ ಸೊಸೆಯಿಂದ ಹಲ್ಲೆ…

223
firstsuddi

ಹಾಸನ : ಮಾವಿನ ಫಸಲು ತನಗೂ ಬೇಕು ಎಂದು ಹೇಳಿದ್ದ ಹೆತ್ತ ಅಮ್ಮನ ಮೇಲೆ ಮಗ ಹಾಗೂ ಸೊಸೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಲ್ಲಪ್ಪನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಮಾವಿನ ಹಣ್ಣನ್ನು ಕುಯ್ಯುತ್ತಿದ್ದ ಮಗ ರಾಜೇಶ್ ಹಾಗೂ ಸೊಸೆ ಯಶೋಧ ಅವರಿಗೆ ನನಗೂ ಸ್ವಲ್ಪ ಉಳಿಸಿ ಎಂದು ಅಮ್ಮ ಕೇಳಿದ್ದು, ಈ ವೇಳೆ ಅತ್ತೆ ಗೌರಮ್ಮ ಅವರ ಮಾತಿಗೆ ಕೆರಳಿದ ಸೊಸೆ ಗಂಡನೆದುರೇ ಮನಬಂದಂತೆ ಥಳಿಸಿದ್ದಾರೆ. ಹಲ್ಲೆಯಿಂದ ಅಸ್ವಸ್ಥಗೊಂಡ ವೃದ್ದೆಯನ್ನು ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.