ಇಂದಿನ ಮದುವೆ ಸಮಾರಂಭಗಳಲ್ಲಿ ಹಳೆಯ ಸಂಪ್ರದಾಯಗಳು ಕಾಣೆಯಾಗಿದೆ : ಡಾ. ಮೋಟಮ್ಮ…

418
firstsuddi

ಕೊಟ್ಟಿಗೆಹಾರ : ಸಾರ್ಥಕ ಬದುಕಿಗೆ ಸಾಂಸಾರಿಕ ಮೌಲ್ಯಗಳು ಅಗತ್ಯವಿದ್ದು ಸಾಂಸಾರಿಕ ಮೌಲ್ಯಗಳ ಮಹತ್ವ ಅರಿತು ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಉಪನ್ಯಾಸಕ ಡಾ.ಎಚ್.ಎಸ್ ಸತ್ಯನಾರಾಯಣ ಹೇಳಿದರು.
ನಿಡುವಾಳೆಯ ಶ್ರೀರಾಮೇಶ್ವರ ದೇವಸ್ಥಾನದ ಸಂತೋಷ್ ಮತ್ತು ಯಶೋದ ದಂಪತಿಗಳ ವಿವಾಹ ಸಮಾರಂಭದಲ್ಲಿ ನಡೆದ ಸಾಹಿತ್ಯಾಕ್ಷತೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಸಂಸ್ಕೃತಿ ಸಂಪ್ರದಾಯಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ ಅದನ್ನು ರೂಡಿಸಿಕೊಂಡು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳಬೇಕಾದ ದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ. ಇಂದಿನ ದಿನಗಳಲ್ಲಿ ಆಚರಣೆಗಳ ಹಿಂದಿರುವ ಮಹತ್ವದ ಅರಿವಿಲ್ಲದೆ ಇರುವುದು ವಿಪರ್ಯಾಸವಾಗಿದೆ. ಆಚರಣೆಗಳ ಹಿಂದಿನ ಮಹತ್ವವನ್ನು ಅರಿತು ಆಚರಿಸಬೇಕಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವೆ ಮೋಟಮ್ಮ ಮಾತನಾಡಿ ಇಂದಿನ ಮದುವೆ ಸಮಾರಂಭಗಳಲ್ಲಿ ಹಳೆಯ ಸಂಪ್ರದಾಯಗಳು ಕಾಣೆಯಾಗಿದೆ. ಮಲೆನಾಡಿನಲ್ಲಿ ಸೋಬಾನೆ ಪದಗಳಿಲ್ಲದೆ ಮದುವೆಗಳು ಪೂರ್ಣಗೊಳ್ಳುತ್ತಿರಲಿಲ್ಲ. ಆದರೆ ಇಂದು ಮದುವೆ ಮನೆಯಲ್ಲಿ ಸೋಬಾನೆ ಪದಗಳು ಕೇಳುವುದೆ ಅಪರೂಪವಾಗಿದೆ ಎಂದರು.
ಶಾಸಕ ಎಂ.ಪಿ ಕುಮಾರಸ್ವಾಮಿ ಮಾತನಾಡಿ ನಮ್ಮ ಹಿರಿಯರಿಂದ ಬಂದ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ. ಸಂಪ್ರದಾಯಗಳ ಅರ್ಥವನ್ನು ಯುವಪೀಳಿಗೆಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದರು.
ಮೂಡಿಗೆರೆ ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಬಣಕಲ್ ಕಸಾಪ ಅಧ್ಯಕ್ಷ ಮೋಹನ್‍ಕುಮಾರ್ ಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ನವದಂಪತಿಗಳಾದ ಸಂತೋಷ್ ಡಿ ಸಾಲಿಯಾನ್ ಮತ್ತು ಯಶೋಧ ಅವರನ್ನು ಸನ್ಮಾನಿಸಲಾಯಿತು.
ಉರುವಿನ್‍ಖಾನ್ ಎಸ್ಟೇಟ್ ವ್ಯವಸ್ಥಾಪಕ ನಾಗರಾಜಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಬಾಳೂರು ಹೋಬಳಿ ಅಧ್ಯಕ್ಷ ಚನ್ನಕೇಶವಗೌಡ, ಕಸಾಪ ಕಾರ್ಯದರ್ಶಿಗಳಾದ ಲಕ್ಷ್ಮಣಗೌಡ, ವಸಂತ್ ಹಾರ್ಗೋಡು, ಶಿಕ್ಷಕರಾದ ಶೇಖರಪ್ಪ, ಭಕ್ತೇಶ್, ಮನಮೋಹನ್, ಲೋಕೇಶ್, ಲಿಂಗರಾಜ್, ಸ್ಥಳಿಯರಾದ ದೇವರಾಜ್, ಸೋಮೇಶ್ ಮರ್ಕಲ್, ಸಂತೋಷ್ ಅತ್ತಿಗೆರೆ, ಲಿಂಗಪ್ಪ, ಕಿಟ್ಟ, ನಟೇಶ್, ಮಂಜು, ರವಿ ವಾಟೆಖಾನ್, ಕೃಷ್ಣಟೈಲರ್ ಮುಂತಾದವರು ಇದ್ದರು.